ಅನೈತಿಕ ಸಂಬಂಧ ಹಿನ್ನಲೆ ಅಣ್ಣಾ.ತಂಗಿ ಮೇಲೆ ಚಾಕು ಇರಿತ ; ಆರೋಪಿಗಳನ್ನು ಬಂದಿಸಿ ಜೈಲಿಗೆ ಅಟ್ಟಿದ ವಿದ್ಯಾನಗರ ಪೊಲೀಸರು

ಹುಬ್ಬಳ್ಳಿ : ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಯುವಕನೊಬ್ಬ ಅಣ್ಣ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಕಳೆದ ಕೆಲವು ದಿನಗಳ ಹಿಂದೆ ನಡೆದಿದೆ.

ಬಾದಾಮಿ ಓಣಿಯ ನಿವಾಸಿಗಳಾದ ದ್ಯಾಮಣ್ಣ ಹಾಗೂ ತಾಯವ್ವ.ಮೇಲೆ ಮಾರಣಾಂತಿಕ ವಾಗಿ ಚಾಕುವಿನಿಂದ ಹಲ್ಲೆಯನ್ನು ಹನುಮಂತ ಚನ್ನೇಗೌಡರ ಹಾಗು ಅಕ್ರಮ ಸಂಭಂದ ಹೊಂದಿದ ಪ್ರಿಯಾ ಮಾಡುತ್ತಾರೆ . ಗಾಯಗೊಂಡಿರುವ ಅಣ್ಣ -ತಂಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಇನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಂಬಿ ಎನಿಸುವ ಹಾಗೆ ಮಾಡಿದ್ದಾರೆ .

ಒಂದೆ ಓಣಿಯಲ್ಲಿ ಹನುಮಂತ ಚನ್ನೇಗೌಡರ . ದ್ಯಾಮಣ್ಣ.ಹಾಗು ಪ್ರಿಯಾ ಇವರ ಮನೆ ಇದ್ದು .ಇನ್ನು ಹನುಮಂತ ಚನ್ನೇಗೌಡರ ಜೊತೆ ದ್ಯಾಮಣ್ಣನ ಹೆಂಡತಿ ಪ್ರಿಯಾ ಅಕ್ರಮ ಸಂಬಂಧ ಹೊಂದಿದಳು ಎಂದು ದ್ಯಾಮಣ್ಣ ಆರೋಪಿಸಿದ್ದಾನೆ. ದ್ಯಾಮಣ್ಣ ಮತ್ತು ಅವರ ತಂಗಿ ಇದರಿಂದ ಮನನೊಂದು ತಿಳುವಳಿಕೆ ಹೇಳಲು ಪ್ರಿಯಾಳ ತವರು ಮನೆಗೆ ಹೋದಾಗ ಅಲ್ಲೆ ಇದ್ದ ಹನುಮಂತನ ಚನ್ನೇಗೌಡರ ಹಾಗು ಪ್ರಿಯಾ ಇಬ್ಬರು ಸೇರಿ ತಿಳುವಳಿಕೆ ಹೇಳಲು ಬಂದಿದ್ದ ಅಣ್ಣಾ-ತಂಗಿಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದರು ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊದಲು ಹನುಮಂತನ ಚನ್ನೆಗೌಡರನ್ನು ಬಂಧಿಸಿ ತನಿಖೆ ನಡೆಸಿದಾಗ ತನಿಖೆಯಿಂದ ಅವನ ಜೊತೆಗೆ ಈ ಕೊಲೆ ಯತ್ನಕ್ಕೆ ಸಹಕರಿದ ಆರೋಪಿ ಪ್ರಿಯಾ ಅಂತಾ ಗೊತ್ತಾದ ಮೇಲೆ ಅವಳನ್ನು ಬಂಧಿಸಿ ಕೃಷ್ಣನ ಜನ್ಮಸ್ಥಳ ಕ್ಕೆ ಕಳಸಿದ್ದು ತಮಗೆ ನ್ಯಾಯ ದೊರಕಿದೆ ಅಂತಾ ಅಣ್ಣಾ- ತಂಗಿ ತಿಳಸಿದ್ದಾರೆ
ಅವಳಿ ನಗರ ಆಯುಕ್ತರು .ಎ ಸಿ ಪಿ ವಿನೋದ ಮುಕ್ತೇದಾರ .ಹಾಗು ವಿದ್ಯಾನಗರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಪವಾರ್ ಮತ್ತು ಅವರ ಸಿಬ್ಬಂದಿಗೆ ತುಂಬು ಹೃದಯದಿಂದ ಧನ್ಯವಾದಗಳು ಅಂತಾ ಅಣ್ಣಾ-ತಂಗಿ ತಿಳಸಿದ್ದು ತಮಗೆ ನಿಜವಾಗಿಯೂ ಪೊಲೀಸರಿಂದ ನ್ಯಾಯ ಸಿಕ್ಕಿದೆ ಅಂತಾ ಹರ್ಷ ವ್ಯೆಕ್ತ ಪಡಿಸಿದ್ದಾರೆ