Uncategorized

ಚಾಲಾಕಿ ಟ್ರ್ಯಾಕ್ಟರ್ ಕಳ್ಳನನ್ನು ಬಂಧಿಸಿದ ಗ್ರಾಮೀಣ ಠಾಣೆಯ ಪೊಲೀಸರು

ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ್ದಾರೆ ಕಳೆದ ತಿಂಗಳು ಅಂಚಟಗೇರಿ ಮೊರಾರ್ಜಿ ಶಾಲೆಯ ಹತ್ತಿರದ ರಸ್ತೆಯಲ್ಲಿನ ಸಂತೋಷ ಕುಮಾರ ಸಿದ್ದಪ್ಪ ಸಾದರ್ ಇವರ. ಎಚ್ ಎಮ್ ಟಿ 3522 ನಂಬರಿನ ಟ್ರ್ಯಾಕ್ಟರ್ ಕಳ್ಳತನ ಮಾಡಿ ಪರಾರಿ ಆಗಿದ್ದ ಅಕ್ಬರಭಾಷಾ ಮುನೀರಭಾಷಾ ಕಂಬಾರಗಣವಿ ಎಂಬ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು.ಇನ್ನು ಇಬ್ಬರು ಕಳ್ಳರು ಪರಾರಿ ಆಗಿದ್ದಾರೆ. ಪೊಲೀಸರು ಬಂಧಿತ ಕಳ್ಳನನ್ನು ವಿಚಾರಣೆ ನಡೆಸಿದಾಗ. ಬಂಧಿತನ ಜೊತೆ ಇ‌ನ್ನು ಇಬ್ಬರು ಅವನ ಜೊತೆಯಲ್ಲಿ ಇದ್ದು ಮೂವರು ಸೇರಿ ಅಂಚಟಗೇರಿ ಒಂದು ಧಾರವಾಡದ ಉಪನಗರ ಹಾಗು ಶಹರ ಠಾಣೆಯ ವ್ಯಾಪ್ತಿಯಲ್ಲಿಯು ಕೂಡಾ ಚಾಣಾಕ್ಷತನದಿಂದ ಟ್ರ್ಯಾಕ್ಟರ ಕಳ್ಳತನ ಮಾಡಿದ್ದು ತನಿಖೆಯ ವೇಳೆ ಗೊತ್ತಾಗಿದ್ದು ಇರುತ್ತದೆ. 2 ಲಕ್ಷ 90 ಸಾವಿರ ಮೌಲ್ಯದ ಟ್ರ್ಯಾಕ್ಟರನ್ನು
ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಮೂಲತಃ ಶಿಂಗನಹಳ್ಳಿ ನಿವಾಸಿ ಆಗಿರುವ ಅಕ್ಬರಭಾಷಾನನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಇನ್ನು ಪರಾರಿ ಆಗಿರುವ ಇಮಾಮಸಾಬ ತಹಶೀಲ್ದಾರ.ಮತ್ತು ಸಯ್ಯದಸಾಬ ದೇವಗಿರಿ ಬಂಧನಕ್ಕೆ ಜಾಲ ಬಿಸಿದ್ದಾರೆ


ಈ ಪ್ರಕರಣವನ್ನು ಜಿಲ್ಲಾ ಪೊಲೀಸ ಅಧೀಕ್ಷಕರು ಲೊಕೇಶ ಜಗಲಾಸರ್ ಹಾಗು .ಎಮ್ ಬಿ ಸಂಕದ ಇವರ ಮಾರ್ಗದರ್ಶನದಲ್ಲಿ .ಗ್ರಾಮೀಣ ಠಾಣೆಯ ಇನ್ಸಪೆಕ್ಟರ ರಮೇಶ ಗೋಕಾಕ ಇವರ ನೇತೃತ್ವದಲ್ಲಿ ಪಿಎಸಐ ಡಿ ಚಾಮುಂಡೇಶ್ವರಿ ಹಾಗು ಸಿಬ್ಬಂದಿ ಗಳಾದ ಎನ್ ಎಮ್ ಹೊನ್ನಪ್ಪನವರ. ಸುರೇಶ್ ಹುಡೇದ. ಮಹಾಂತೇಶ ನಾನಾಗೌಡ್. ಗಿರೀಶ್ ತಿಪ್ಪಣ್ಣವರ. ಡಿ ಎನ್ ನೀಲಮ್ಮನವರ.ನಂದೀಶ ವಡ್ರಾಳಿ. ಪ್ರೇಮನಾಥ ರಾಠೋಡ. ಮಂಜು ಮದುಗಿರಿ . ಸಿ ಬಿ ಜನಗಣ್ಣವರ. ಸಂಗಮೇಶ. ಎ ಎ ಠಕಾಯಿ. ಜಗದೀಶ್ ಬರಿಗಾಲ. ಅಕ್ಬರ ವಾಲೀಕಾರ. ಕರಿಯಪ್ಪ ಕರಿಗಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಅಧೀಕ್ಷಕರು ಲೊಕೇಶ ಜಗಲಾಸರ ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!