ಕೊಲೆ ಮಾಡಿ ಪರಾರಿ ಆದ ಆರೋಪಿಯನ್ನು ಬಂಧಿಸಿದ ಪೊಲೀಸರು

ಹಳೇ ಹುಬ್ಬಳ್ಳಿಯ ದುರ್ಗದ ಬೈಲ್ ಸರ್ಕಲ್ ಬಳಿ, ಹಳೆ ದ್ವೇಷದ ಹಿನ್ನಲೆ ಸಂತೋಷ ಮುರಗೋಡ ಎಂಬಾತನ ಮೇಲೆ ಜಂಗ್ಲಿ ಪೇಟೆಯ ಶಿವಾ ಅನ್ನೋ ರೌಡಿ ಶೀಟರ್ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ.
ಚಾಕು ಇರಿತಕ್ಕೆ ಒಳಗಾದ ಸಂತೋಷ ನನ್ನು ಚಿಕಿತ್ಸೆಗಾಗಿ ಕಿಮ್ಸ್ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾದೆ ಸಾವನಪ್ಪಿದ್ದಾನೆ. ಇಬ್ಬರು ಕೂಡಾ ಒಂದೆ ಓಣಿಯ ನಿವಾಸಿಗಳಾಗಿದ್ದು,ಇಬ್ಬರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು.

ಕೆಲವು ದಿನಗಳ ಹಿಂದೆ ಚಾಕು ಇರಿದ ಶಿವಾ ಜಾಮೀನು ಪಡೆದು ಹೊರಗಡೆ ಬಂದಿದ್ದ, ಶಿವನ ಮೇಲೆ ದರೋಡೆ ಸಹಿತ 2೦ ರಿಂದ 3೦ ಕೇಸುಗಳು ದಾಖಲಿವೆ.

ಕೊಲೆ ಮಾಡಿ ಪರಾರಿ ಆದ ಜಂಗ್ಲಿ ಪೇಟೆಯ ರೌಡಿ ಶಿವಾ ನನ್ನು ಕೆಲವೆ ಗಂಟೆಗಳಲ್ಲಿ ಬಂದಿಸಿದ್ದಾರೆ ಈ ಕುರಿತು ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಿಚಾರಣೆ ನಡೆಸಿದ್ದು ,ಕೊಲೆ ಗೆ ಸಾಥ್ ನೀಡಿದ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ…