ಇನ್ಸಪೆಕ್ಟರ ಆರ್ ಎಸ್ ನಾಯಕ .ಹಾಗು ಪಿ.ಎಸ.ಐ ರವಿ ವಡ್ಡರ ಬಲೆಗೆ ಬಿದ್ದ ರಿಂಗ್ ರೋಡ ದರೋಡೆಕೋರರ ಗ್ಯಾಂಗ್

ಹುಬ್ಬಳ್ಳಿ: ನಗರದ ಹೊರವಲಯದ ರಿಂಗ್ ರೋಡ್’ನಲ್ಲಿ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಖತರ್ನಾಕ ದರೋಡೆಕೋರ ಗ್ಯಾಂಗ್’ನ್ನು ಬೆಂಡಿಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಿಂಗ್ ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಡೆದು ದರೋಡೆ ಮಾಡುತ್ತಿದ್ದ ಪ್ರಕರಣ ಪದೆ ಪದೇ ಬೆಂಡಿಗೇರಿ ಪೊಲೀಸರಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಬೆಂಡಿಗೇರಿ ಪೊಲೀಸರ ಬಲೆಗೆ ದರೋಡೆಕೋರರು ಬಿದ್ದಿದ್ದಾರೆ.

ಏಳು ಜನ ಆರೋಪಿಗಳನ್ನು ಬಂಧಿಸಿ 4100 ರೂ ನಗದು ಸೇರಿದಂತೆ ಮೂರು ಮೊಬೈಲ್, ಎರಡು ದ್ವಿಚಕ್ರ ವಾಹನ, ಒಂದು ಚಾಕು, ಖಾರದ ಪುಡಿ, ಒಂದು ಆಟೋ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಗಂಗಾಧರನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ್, ಕೆ.ಬಿ.ನಗರದ ದೀಪಕ್ ನರಗುಂದ, ಶ್ರೀನಿವಾಸ್ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ್ ಸಾತಪತಿ, ಗೋಪನಕೊಪ್ಪದ ನಾಗರಾಜ್ ಬಳ್ಳಾರಿ ಎಂದು ಗುರುತಿಸಲಾಗಿದೆ.

ಆರೋಪಿಗಳೆಲ್ಲ ಕೂಡಿಕೊಂಡು ರಿಂಗ್ ರಸ್ತೆಯಲ್ಲಿ ಬೈಕ್ ಹಾಗೂ ಲಾರಿಗಳನ್ನು ಅಡ್ಡಗಟ್ಟಿ ಖಾರದಪುಡಿ ಎರಚಿ, ಚಾಕುವಿನಿಂದ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.

ಇದು ರಿಂಗ್ ರೋಡ್ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಭಯಪಡುವಂತಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಪೊಲೀಸ್ ಠಾಣೆಯ ಪಿಐ ಎಸ್.ಆರ್.ನಾಯಕ್ ನೇತೃತ್ವದ ತಂಡ ಪಿಎಸ್ಐ ರವಿ ವಡ್ಡರ, ಎಎಸ್ಐ ಟಿ.ಎನ್. ಸವದತ್ತಿ, ಸಿಬ್ಬಂದಿ ಪಿ.ಜಿ.ಪುರಾಣಿಕಮಠ, ಎನ್.ಐ. ನಿಲಗಾರ್, ಪಿ.ಎಫ್.ಅಂಬಿಗೇರ್, ಆರ್.ಎಸ್.ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ತಂಡ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಇವರ ಕಾರ್ಯಾಚರಣೆಗೆ ಪೊಲೀಸ ಆಯುಕ್ತರು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.