ಹೆಂಡತಿಯಿಂದ ಪತಿಯ ಮೇಲೆ ಬಲವಂತದಿಂದ ಮತಾಂತರಕ್ಕೆ ಪಟ್ಟು

ಹುಬ್ಬಳ್ಳಿ ಬ್ರೇಕಿಂಗ್…
ಹುಬ್ಬಳ್ಳಿಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಮಾತಾಂತರ ವಿವಾದ.
ಹಳೆ ಹುಬ್ಬಳ್ಳಿಯ ಶಿಕ್ಕಲಗಾರ ಸಮುದಾಯದ ಕುಟುಂಬಗಳನ್ನ ಟಾರ್ಗೆಟ್ ಮಾಡಿ ಮತಾಂತರ.
ಮತಾಂತರ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಘೇರಾವ್.
ಶಿಕ್ಕಲಿಗಾರ ಸಮುದಾಯ ಸೇರಿದಂತೆ ಹಿಂದೂ ಮುಖಂಡರಿಂದ ಠಾಣೆಗೆ ಘೇರಾವ್.
ಮತಾಂತರ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಮುಖಂಡರ ಪಟ್ಟು.
ಗಂಡನಿಗೆ ಮತಾಂತರ ಅಗುವಂತೆ ಮಹಿಳೆಯ ಒತ್ತಾಯದಿಂದ ಶುರುವಾದ ಮತಾಂತರದ ರಗಳೆ.
ಮತಾಂತರ ಆಗದಿದ್ರೆ, ಸಂಸಾರ ಮಾಡದೇ ಇರುವುದಾಗಿ ಪತ್ನಿಯಿಂದ ಬೆದರಿಕೆ.
ಮತಾಂತರ ಆಗುವಂತೆ ಪತ್ನಿ ಪಟ್ಟು ಹಿಡಿದಿದ್ದಕ್ಕೆ ಬೇಸತ್ತು ಸಮುದಾಯದ ಮುಖಂಡರ ಗಮನಕ್ಕೆ ತಂದ ವ್ಯಕ್ತಿ.
ಸಂಪತ್ ಬಗನಿ ಎಂಬಾತನಿಗೆ ಮತಾಂತರ ಆಗುವಂತೆ ಹೆಂಡತಿಯ ಪಟ್ಟು.
ಮತಾಂತರ ವಿಚಾರವಾಗಿ ಹಲವು ಬಾರಿ ಠಾಣೆ ಮೆಟ್ಟಿಲೇರಿದ್ದ ದಂಪತಿ.
ಪ್ರತಿ ಬಾರಿ ರಾಜೀ ಮಾಡಿ ಕಳಿಸಿದ್ದ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು.
ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಆಗುವಂತೆ ಒತ್ತಾಯ.
ಠಾಣೆಯಲ್ಲಿ ಜಮಾವಣೆಗೊಂಡ ಶಿಕ್ಕಲಿಗಾರ ಸಮುದಾಯದ ಯುವಕರು ಹಾಗೂ ಹಿಂದೂ ಮುಖಂಡರು.
ಸ್ಥಳಕ್ಕೆ ಹಿಂದೂ ಮುಖಂಡ ಜಯತೀರ್ಥ ಕಟ್ಟಿ ಸೇರಿದಂತೆ ಇತರರು ಭೇಟಿ.
ಶಿಕ್ಕಲಿಗಾರ ಸಮುದಾಯದಿಂದ ರೌಡಿ ಶೀಟರ್ ಮದನ್ ಬುಗುಡಿ ಸೇರಿದಂತೆ ಹದಿನೈದು ಜನರ ವಿರುದ್ದ ಮತಾಂತರದ ದೂರು ದಾಖಲು.