ಕಸಬಾಪೇಟೆ ಇನ್ಸಪೆಕ್ಟರ ಅಡಿವೆಪ್ಪ ಬನ್ನಿ ಅಮಾನತ್ತು

ಕಸಬಾಪೇಟೆ ಪೊಲೀಸ್ ಇನ್ಸಪೆಕ್ಟರ್ ಬನ್ನಿ ಅಮಾನತ್ತು..
ಪೊಲೀಸ್ ಇನ್ಸಪೆಕ್ಟರ್ ಅಡಿವೆಪ್ಪ ಬನ್ನಿ ಅಮಾನತ್ತು ಮಾಡಿ ಆದೇಶ..
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಭೂರಾಮ್ ರಿಂದ ಆದೇಶ…
ಕರ್ತವ್ಯ ಲೋಪದ ಹಿನ್ನಲೆ ಅಡಿವೆಪ್ಪ ಬನ್ನಿ ಅಮಾನತ್ತು..ಅಮಾನತ್ತು ಆದೇಶವಾಗಲೇ ಆಸ್ಪತ್ರೆ ಸೇರಿದ ಪೊಲೀಸ್ ಇನ್ಸಪೆಕ್ಟರ್ ಬನ್ನಿ..
ಆರೋಗ್ಯದಲ್ಲಿ ಏರುಪೇರಾಗಿ ಖಾಸಗಿ ಆಸ್ಪತ್ರೆ ಸೇರಿದ ಬನ್ನಿ…
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಗೆ ಚಿಕಿತ್ಸೆ
ಕಳೆದ 12 ರಂದು ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತೋಷ್ ಮುರಗೋಡ್ ಕೊಲೆಯಾಗಿತ್ತು..
ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ರೌಡಿ ಶೀಟರ್ ಶಿವಾನಂದ…
ರೌಡಿ ಶೀಟರ್ ಶಿವಾನಂದ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ದ..
ಆತನ ವಿರುದ್ದ ದೂರು ಕೊಟ್ರು ತಗೆದುಕೊಳ್ಳದ ಕಸಬಾಪೇಟೆ ಪೊಲೀಸರು..
ಹೀಗಾಗಿ ಸಂತೋಷ್ ಸಂಬಂಧಿಕರು ಕಸಬಾಪೇಟೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ಮಾಡಿದ್ರು.
ಸಂತೋಷ್ ಮುರಗೋಡ ಶವ ಇಟ್ಟು ಪ್ರತಿಭಟನೆ ಮಾಡಿದ್ರು..
ಸಂತೋಷ್ ಮುರಗೋಡ್ ಹುಬ್ಬಳ್ಳಿಯ ಜಂಗ್ಲಿಪೇಟೆ ನಿವಾಸಿ..
ಸಂತೋಷ್ ಸಾವಿಗೆ ಕಸಬಾಪೇಟೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅನ್ನೋ ಆರೋಪ ಕೇಳಿ ಬಂದಿತ್ತು.
ಇದೀಗ ಕರ್ತವ್ಯ ಲೋಪದ ಹಿನ್ನಲೆ ಪೊಲೀಸ್ ಇನ್ಸಪೆಕ್ಟರ್ ಅಡಿವೆಪ್ಪ ಬನ್ನಿ ಅಮಾನತ್ತು. ಇನ್ನು ಸಂತೋಷ ಮುರಗೋಡ ಹತ್ಯೆ ಕೇಸಿನಲ್ಲಿ ಇನ್ನಿಬ್ಬರ ಬಂದನ್
ಮಹೇಶ ಕಲಾಲ ಹಾಗು ಮಾರುತಿ ಚಾಂದಕೋಟಿ ಬಂದಿಸಿ ವಿಚಾರಣೆ ನಡೆಸುತ್ತಿರುವ ಕಸಬಾ ಪೊಲೀಸರು
