ಹೆತ್ತ ಮಗಳನ್ನೆ ಕೊಂದ ಪಾಪಿ ತಾಯಿ.ತಾಯಿಯ ಕಾಮಕ್ಕೆ ಬಲಿ ಆಯಿತಾ ನಾಲ್ಕು ವರ್ಷದ ಹೆಣ್ಣು ಮಗು

ತಾಯಿಯ ಅನೈತಿಕ ಸಂಬಂಧ ನೋಡಿದ ವಿಕಲಚೇತನ ಮಗಳನ್ನೇ ಅಮಾನುಷವಾಗಿ ಕೊಲೆಗೈದ ಘಟನೆ ಗುರುವಾರ ರಾತ್ರಿ ನಡೆದಿದೆ.
ಧಾರವಾಡದಲ್ಲಿ ಸತತ ೫ ದಿನಗಳಿಂದ ಅಪರಾಧ ಕೃತ್ಯಗಳು ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳುಸುವಂತೆ ಮಾಡಿದೆ

ಧಾರವಾಡದ ಕಮಲಾಪುರದ ಹೂಗಾರ ಓಣಿಯಲ್ಲಿ ಈ ಒಂದು ಘಟನೆ ಸಂಭವಿಸಿದ್ದು, ಜ್ಯೋತಿ ಹಿರೇಮಠ ಎಂಬಾಕೆಯೇ ಸಹನಾ ಹಿರೇಮಠ ಎಂಬ ನಾಲ್ಕು ವರ್ಷದ ತನ್ನ ಮಗಳನ್ನೇ ಕೊಲೆಗೈದಿದ್ದಾಳೆ.

ಅನೈತಿಕ ಸಂಬಂಧವನ್ನು ಹೊಂದಿದ ತಾಯಿಯನ್ನು ಓರ್ವ ವ್ಯಕ್ತಿಯ ಜೊತೆಗೆ ಇರುವುದನ್ನು ಆಕೆಯ ಮಗಳು ನೋಡಿರುತ್ತಾಳೆ. ಆದರೇ ಅನೈತಿಕ ಸಂಬಂಧಕ್ಕೆ ಮಗಳು ಅಡ್ಡಿ ಆಗುತ್ತಾಳೆ ಎಂಬ ಆತಂಕದಲ್ಲಿ ತಾನು ಹೆತ್ತ ಮಗಳು ಅಂತಾ ನೋಡದೆ ತಾಯಿ ಕೊಲೆಗೈದಿದ್ದು, ಕೊಲೆಗೆ ಹಿಂದಿರುವ ಸತ್ಯಾಂಶವು ತನಿಖೆಯ ನಂತರ ಬೆಳಕಿಗೆ ಬರಲಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.