1231 ವಿದ್ಯಾರ್ಥಿಗಳು, 63 ಜನ ಸಿಬ್ಬಂದಿ ವರ್ಗದವರು ಸೇರಿ 108 ಸಲ ಧನ್ವಂತರಿ ಶ್ಲೋಕದ ಪಠಣವನ್ನು ಮಾಡಲಾಯಿತು.

ರಾಜರ್ಷಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ 75 ನೇ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ 108 ಧನ್ವಂತರಿ ಶ್ಲೋಕದ ಪಠಣ ಮತ್ತು ಫಲದಾನದ ಕಾರ್ಯಕ್ರಮ ಅದ್ದೂರಿಯಾಗಿ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಧಾರವಾಡದಲ್ಲಿ ದಿನಾಂಕ 24.11.2022 ರಂದು ರಾಜರ್ಷಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ 75 ನೇ ಹುಟ್ಟು ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ 1231 ವಿದ್ಯಾರ್ಥಿಗಳು, 63 ಜನ ಸಿಬ್ಬಂದಿ ವರ್ಗದವರು ಸೇರಿ 108 ಸಲ ಧನ್ವಂತರಿ ಶ್ಲೋಕದ ಪಠಣವನ್ನು ಮಾಡಲಾಯಿತು. ಸಂಸ್ಕೃತದಲ್ಲಿ ಹುಟ್ಟುಹಬ್ಬದ ಹಾಡನ್ನು ಹಾಡಿ ಪೂಜ್ಯರ ಒಳ್ಳೆಯ ಆರೋಗ್ಯ ಮತ್ತು ಆಯುಷ್ಯಕ್ಕಾಗಿ ಪ್ರಾರ್ಥನೆ ಮಾಡಲಾಯಿತು.

ಪ್ರತಿಯೊಂದು ವಿದ್ಯಾರ್ಥಿಯಿಂದ ಒಂದೊಂದು ಫಲವನ್ನು ಸಂಗ್ರಹಿಸಿ ಅವುಗಳನ್ನು ಸಿವಿಲ್ ಆಸ್ಪತ್ರೆಯ ರೋಗಿಗಳಿಗೆ ದಾನ ಮಾಡಲಾಯಿತು. ಮಕ್ಕಳಿಂದ ಚಿತ್ರಕಲೆಯಲ್ಲಿ ಅರಳಿದ ಪೂಜ್ಯರ ಭಾವಚಿತ್ರಗಳನ್ನು ಹಾಗೂ ಪೂಜ್ಯರ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಭಾವಚಿತ್ರಗಳನ್ನು ಪ್ರೊಜೆಕ್ಟರ್ ಮುಖಾಂತರ ಪರದೆಯ ಮೇಲೆ ಪ್ರದರ್ಶನ ಮಾಡಲಾಯಿತು. ಪೂಜ್ಯ ಖಾವಂದರ ಉತ್ತಮ ಆರೋಗ್ಯ ಹಾಗು ಸಮಿತಿಯ ಎಲ್ಲಾ ಅಂಗಸಂಸ್ಥೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಉತ್ತಮ ಆರೋಗ್ಯದ ಸದುದ್ದೇಶದಿಂದ ಧನ್ವಂತರಿ ಮಂತ್ರವನ್ನು ಪಠಣ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|| ಅಜಿತ್ ಪ್ರಸಾದ್ ಅವರು, ಹಾಗೂ ಐ .ಟಿ. ಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ್ ಉಪಾಧ್ಯೆ ಅವರು ಆಗಮಿಸಿದ್ದರು.