Uncategorized

ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವ. ಸದ್ಗುರು ಸಿದ್ಧಾರೂಢರ ದರ್ಶನ ಪಡೆಯಲು ಭಕ್ತಸಾಗರವೇ ಮಠಕ್ಕೆ ಹರಿದು ಬಂದಿತ್ತು

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನೆರವೇರಿತು. ಮಠದ ಆವರಣ ಹಣತೆಗಳ ಬೆಳಕಲ್ಲಿ ಪ್ರಜ್ವಲಿಸಿತು. ಸದ್ಗುರು ಸಿದ್ಧಾರೂಢರ ದರ್ಶನ ಪಡೆಯಲು ಭಕ್ತಸಾಗರವೇ ಮಠಕ್ಕೆ ಹರಿದು ಬಂದಿತ್ತು.

ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿಗಳ ಪವಾಡ ಅಪರಂಪಾರ. ಸರಳ ಜೀವನ ಮತ್ತು ಬೋಧನೆಯಿಂದಾಗಿ ಸಿದ್ಧಾರೂಢರಿಗೆ ಜಗತ್ತಿನಾದ್ಯಂತ ಅಪಾರ ಭಕ್ತ ವೃಂದವೇ ಇದೆ. ಮಠದಲ್ಲಿ ನಿತ್ಯ ನಿರಂತರ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ಸಿದ್ಧಾರೂಢರ ದರ್ಶನಾಶಿರ್ವಾದ ಪಡೆಯಲು ರಾಜ್ಯದ ವಿವಿದೆಡೆಗಳಿಂದ ಭಕ್ತ ಸಾಗರವೇ ಮಠಕ್ಕೆ ಹರಿದು ಬರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮಠದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಠದ ಕೈಲಾಸ ಮಂಟಪದ ಆವರಣದಲ್ಲಿ ದೀಪ ಬೆಳಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಅತ್ಯಂತ ಶೃದ್ಧೆಯಿಂದ ಭಾಗವಹಿಸಿದ್ದರು.

ಮಠಕ್ಕೆ ಆಗಮಿಸಿದ ಭಕ್ತರು ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು. ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡುವಂತೆ ಸಿದ್ಧಾರೂಢರಲ್ಲಿ ಪ್ರಾರ್ಥಿಸಿದ್ರು. ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಮಣ್ಣಿನ ಹಣತೆಗಳಿಗೆ ಎಣ್ಣೆ ಹಾಕಿ ದೀಪವನ್ನು ಪ್ರಜ್ವಲಿಸಿದ್ರು. ಮಠದ ಆವರಣ ಸಾವಿರಾರು ಹಣತೆಗಳಿಂದ ಕಂಗೊಳಿಸಿತು‌. ಎಲ್ಲಿ ನೋಡಿದರಲ್ಲಿ ಬೆಳಕಿನ ಚಿತ್ತಾರ ಕಂಡುಬಂತು.

ಭಕ್ತರು ಸರತಿ ಸಾಲಲ್ಲಿ ನಿಂತು. ಸಿದ್ಧಾರೂಢರಿಗೆ ಹೂವು, ಹಣ್ಣು, ನೈವೇದ್ಯ ಸಮರ್ಪಿಸಿದ್ರು. ಮನೋಕಾಮನೆ ಈಡೇರಿಸುವಂತೆ ಪ್ರಾರ್ಥಿಸಿದ್ರು. ಸಿದ್ಧಾರೂಢ ಮಠದ ಟ್ರಸ್ಟ ಕಮಿಟಿಯಿಂದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಠದ ಆವರಣದಲ್ಲಿ ಓಂ ನಮಃ ಶಿವಾಯ ಮಂತ್ರಘೋಷ ಅನುರಣಿಸಿತು.

Leave a Reply

Your email address will not be published. Required fields are marked *

error: Content is protected !!