ಯುವಕನ ಮೇಲೆ ಗ್ಯಾಂಗ್ ರೇಪ್ ನಾಲ್ಕು ಯುವತಿಯರ ಮೇಲೆ FIR

ಇಷ್ಟು ದಿನ ಯುವತಿಯ ಮೇಲೆ ಯುವಕರ ಗ್ಯಾಂಗ ರೇಪ್ ಪ್ರಕರಣಗಳು ಕೇಳಿದ್ದಾಯಿತು. ಇದೀಗ ನಾಲ್ಕು ಜನ ಹುಡುಗಿಯರು ಒಬ್ಬ ಕಾರ್ಮಿಕನನ್ನ ಎಳೆದುಕೊಂಡು ಹೋಗಿ ಮನಸೋ ಇಚ್ಛೆ ಬಳಸಿಕೊಂಡ ಒಂದು ಘಟನೆ ನಡೆದಿರುವುದು ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ. 20 ವರ್ಷದ ಹರೆಯದ ನಾಲ್ಕು ಯುವತಿಯರು ಕಾರ್ ನಲ್ಲಿ ಬಂದು ಒಬ್ಬ ಕಾರ್ಮಿಕರನ್ನು ಪುಸಲಾಯಿಸಿ ಆತನ ಕಣ್ಣುಗಳಿಗೆ ಕೆಮಿಕಲ್ ಸ್ಪ್ರೇ ಮಾಡಿ ಡ್ರಗ್ಸ್ ಸೇವಿಸುವಂತೆ ಒತ್ತಾಯ ಮಾಡಿದ್ದಾರೆ ಬಳಿಕ ಕೈಕಾಲು ಕಟ್ಟಿ ಕಾರನಲ್ಲಿ ಹಾಕಿಕೊಂಡು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ.
ಲೈಗಿಂಕವಾಗಿ ದುರ್ಬಳಕೆ ಯಾರಿಗೂ ಕಾಣದ ನಿರ್ಜನ ಪ್ರದೇಶ ಒಂದರಲ್ಲಿ ಆ ಹುಡುಗನ ಬಿಸಾಡಿ ಪರಾರಿಯಾಗಿದ್ದಾರೆ ಇನ್ನು ಈ ಯುವತಿಯರು ಶ್ರೀಮಂತ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಈ ಘಟನೆಯ ಬಗ್ಗೆ ಕೂಲಂಕುಶವಾಗಿ ವ್ಯಕ್ತಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ. ನಾನು ಕಾರ್ಖಾನೆಯಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಆ ಸಮಯದಲ್ಲಿ ಬಿಳಿಯ ಬಣ್ಣದ ಕಾರೊಂದು ನನ್ನ ಬಳಿ ಬಂದು ನಿಂತಿತು.ಅದರಲ್ಲಿ ನಾಲ್ಕು ಜನ ಯುವತಿಯರು ಇದ್ದರು. ಡ್ರೈವಿಂಗ್ ಮಾಡುತ್ತಿದ್ದ ಯುವತಿ ಕೆಳಗಿಳಿದು ನನ್ನ ಬಳಿ ವಿಳಾಸವೊಂದನ್ನು ಕೇಳಿದಳು.

ನಾನು ಅದನ್ನ ಹೇಳುತ್ತಿರುವ ಸಮಯದಲ್ಲಿ ಇನ್ನೂ ಉಳಿದ ಮೂವರು ಯುವತಿಯರು ತನ್ನ ಕಣ್ಣಿಗೆ ಕೆಮಿಕಲ್ ಸಿಂಪಡಿಸಿ ಬಲಾತ್ಕಾರದಿಂದ ತನ್ನನ್ನು ಕಾರಿನೊಳಗೆ ಎಳೆದುಕೊಂಡು ಹೋದರು.ಕಾರಿನಲ್ಲಿ ಕೂರಿಸಿಕೊಂಡ ಬಳಿಕ ಕೈಗೆ ಹಗ್ಗ ಕಟ್ಟಿ ಕಣ್ಣಿಗೆ ಪಟ್ಟಿ ಕಟ್ಟಿ ಅಪರಿಚಿತ ಸ್ಥಳಕ್ಕೆ ತನ್ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಡ್ರ-ಗ್ಸ್ ಸೇವನೆ ಮಾಡುವಂತೆ ಒತ್ತಾಯ ಮಾಡಿದ್ದಾರೆ ಅಲ್ಲದೆ ಲೈಂಗಿಕವಾಗಿ ತನ್ನನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ನಾಲ್ವರೂ ಯುವತಿಯರು ಕಂಠಪೂರ್ತಿ ಕುಡಿದಿದ್ರು ಅಲ್ಲದೆ ಮಾದಕ ದ್ರವ್ಯವನ್ನು ಸೇವನೆ ಮಾಡಿದ್ದರು.
ಲೈಂಗಿಕವಾಗಿ ತನ್ನನ್ನು ದುರ್ಬಳಕೆ ಮಾಡಿಕೊಂಡು ಮಧ್ಯರಾತ್ರಿ ಸುಮಾರು 3 ಗಂಟೆಗೆ ಅಪರಿಚಿತ ಸ್ಥಳದಲ್ಲಿ ನನ್ನ ಕೈ ಮತ್ತು ಕಣ್ಣಿಗೆ ಪಟ್ಟಿ ಕಟ್ಟಿ ಎಸೆದು ಹೋಗಿದ್ದಾರೆ. ಆ ನಾಲ್ಕು ಯುವತಿಯರು ಪಂಜಾಬಿ ಭಾಷೆಯನ್ನು ಮಾತನಾಡುತ್ತಿದ್ದರು.ಜೊತೆಗೆ ಇಂಗ್ಲೀಷನ್ನು ಚೆನ್ನಾಗಿ ಬಲ್ಲವರಾಗಿದ್ದರು ಈ ನಾಲ್ಕು ಯುವತಿಯರು ಶ್ರೀಮಂತ ಕುಟುಂಬಕ್ಕೆ ಸೇರಿದವರು ಎಂದು ಸಂತ್ರಸ್ತ ಕಾರ್ಮಿಕ ಆರೋಪ ಮಾಡಿದ್ದಾನೆ. ಪೊಲೀಸರು ಸ್ವಯಂ ಪ್ರೇರಿತರಾಗಿ ಈ ಕಂಪ್ಲೇಂಟ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.