ಮನೆ ಕಳ್ಳನನ್ನು ಲಾಕ್ ಮಾಡಿದ ಗ್ರಾಮೀಣ ಠಾಣೆಯ ಪೊಲೀಸರು. 70 ಸಾವಿರ ಮೌಲ್ಯದ ಬೆಳ್ಳಿ ಬಂಗಾರದ ವಸ್ತುಗಳು ವಶ…

ಹುಬ್ಬಳ್ಳಿಯ ಗ್ರಾಮೀಣ ಭಾಗದಲ್ಲಿ ಮನೆ ಕಳ್ಳತನ ಆಗುತ್ತಿರುವ ಬಗ್ಗೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಕಳ್ಳತನ ಪ್ರಕರಣ ಬಗ್ಗೆ ಇನ್ಸಪೆಕ್ಟರ ಮುರುಗೇಶ ಚೆನ್ನಣ್ಣವರ ಒಂದು ತಂಡ ರಚಿಸಿದ್ದರು .ಇನ್ನು ಕಾರ್ಯಾಚರಣೆ ನಡೆಸಿದ ಗ್ರಾಮೀಣ ಪೊಲೀಸರು ಮನೆ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಹುಬ್ಬಳ್ಳಿಯ ತಾರಿಹಾಳದ ನಿವಾಸಿ ಆದ ಹುಸೇನ್ ಹಸನಪ್ಪ ಅಂಚಟಗೇರಿ ಮುಂಜಾನೆ ಲಾಕ ಆದ ಮನೆಗಳನ್ನು ನೋಡಿಕೊಂಡು ರಾತ್ರಿಯಲ್ಲಿ ಕಳ್ಳತನ ಮಾಡಿ ಗೋವಾ ಕ್ಕೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ . ಇನ್ನು ಹುಸೇನನನ್ನು ಬಂಧಿಸಿ ಸುಮಾರು 70.000 ಸಾವಿರ ಮೌಲ್ಯದ ಬೆಳ್ಳಿ ಬಂಗಾರದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ

ಇನ್ನು ಈ ಒಂದು ಕಾರ್ಯಾಚರಣೆಯನ್ನು ಗ್ರಾಮೀಣ ಠಾಣೆ ಇನ್ನೆಕ್ಟರ್ ಮುರಗೇಶ ಚೆನ್ನಣ್ಣವರ ನೇತೃತ್ವದಲ್ಲಿ ಪಿಎಸ್‌ಐ ಸಚಿನ್ ಅಲಮೇಲಕರ, ಸಿಬ್ಬಂದಿಗಳಾದ ಎನ್.ಎಮ್.ಹೊನ್ನಪ್ಪನವರ, ಎ.ಎ.ಕಾಕರ, ಚನ್ನಪ್ಪ ಬಳ್ಳೋಳ್ಳಿ, ಗಿರೀಶ್ ತಿಪ್ಪಣ್ಣವರ, ಎ.ಎ.ಪಾಟೀಲ್, ರವಿ ಮರಡೂರ ಒಳಗೊಂಡ ತಂಡ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಇವರ ಕಾರ್ಯಾಚರಣೆಗೆ ಎಸ್ ಪಿ ಗೋಪಾಲ ಬ್ಯಾಕೋಡ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.