ಭೀಕರ ರಸ್ತೆ ಅಪಘಾತ ಬೈಕೆಗೆ ಬೆಂಕಿ ಒಬ್ಬ ಸ್ಥಳದಲ್ಲಿ ಮೃತ. ಮತ್ತೊಬ್ಬನ ಸ್ಥಿತಿ ಗಂಭೀರ

ಹುಬ್ಬಳ್ಳಿ: ಅತೀವವಾಗಿ ಚಲಿಸುತಿದ್ದ ಬೈಕ್ ವೊಂದು ನಿಂತಿದ್ದ ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರೇ ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕಾರವಾರ ರಸ್ತೆಯ ಇರ್ಫಾನ್ ಐಸ್ ಫ್ಯಾಕ್ಟರಿ ಮುಂದೆ ಇಂದು ಮಧ್ಯಾಹ್ನ ನಡೆದಿದೆ.
ರಸ್ತೆಯ ತಿರುವಿನಲ್ಲಿ ನಿಂತಿದ್ದ ಜೆಸಿಬಿಗೆ ಬೈಕ್ ಸವಾರ ಅಜಾಗರೂಕತೆಯಿಂದ ಹಾಗೂ ಅತೀವವಾಗಿ ಚಾಲನೆ ಮಾಡಿಕೊಂಡು ಬರುತಿದ್ದಾಗ ನಿಯಂತ್ರಣ ತಪ್ಪಿದ ಅಲ್ಲೆ ನಿಂತಿದ್ದ ಜೆಸಿಬಿ ಗೆ ಬೈಕ್ ಡಿಕ್ಕಿ ಆದ ಪರಿಣಾಮ ಬೈಕಿನಲ್ಲಿ ಇದ್ದ ಓರ್ವ ಸಾವನ್ನಪ್ಪಿದರೇ ಸವಾರನ ಹಿಂದೆ ಕುಳಿತುಕೊಂಡಿದ್ದ ಆತನ ಸ್ನೇಹಿತ ಸಹ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಬೈಕ್ ಜೆಸಿಬಿ ಡಿಕ್ಕಿ ಹೊಡೆತಕ್ಕೆ ಬೈಕ್ ಸಂಪೂರ್ಣವಾಗಿ ಸುಟ್ಟ ಕರಕಲಾಗಿದೆ.
ಘಟನಾ ಸ್ಥಳಕ್ಕೆ ಧಕ್ಣಿಣ ಸಂಚಾರಿ ಪೊಲೀಸರು ಬೇಟಿ ನೀಡಿದ್ದಾರೆ. ಇನ್ನು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.