ನಿಮ್ಮ ಡಿಪಾರ್ಟಟ್ಮೇಂಟ್ ನವರು ಕತ್ತೆ ಕಾಯತಾ ಇದ್ದಾರೆ ಎಂದು ಡಿಸಿಪಿ ಯನ್ನೇ ತರಾಟೆಗೆ ತಗೆದುಕೊಂಡ ಹಿಂದೂ ಸಂಘಟನೆ ಮುಖಂಡ –

ಧಾರವಾಡದಲ್ಲಿ ಕಾಂಗ್ರೇಸ್ ಪಕ್ಷದವರು ಪ್ರತಿಭಟನೆ ಮಾಡುವ ಸಮಯದಲ್ಲಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕಾಲಿನಿಂದ ತುಳಿದ ವಿಟಾರ ಕುರಿತಂತೆ ಧಾರವಾಡದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ ಜೋರಾಗುತ್ತಿದೆ.ನಾಲ್ಕೈದು ಸಂಘಟನೆಗಳ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ನಗರದ ಉಪನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡ್ತಾ ಇದ್ದಾರೆ.ಇನ್ನೂ ಪ್ರತಿಭಟನೆಯ ವಿಚಾರ ತಿಳಿದು ಡಿಸಿಪಿ ಸಾಹಿಲ್ ಬಾಗ್ಲಾ ಸ್ಥಳಕ್ಕೆ ಆಗಮಿಸಿದರು.ಈ ಒಂದು ಸಮಯದಲ್ಲಿ ಹಿಂದೂ ಸಂಘಟನೆಯ ಮುಖಂಡ ಶಿವಾನಂದ ಸತ್ತಿಗೇರಿ ಡಿಸಿಪಿ ಅವರನ್ನು ತರಾಟೆಗೆ ತಗೆದುಕೊಂಡರು ದೇಶದ ಒರ್ವ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಕಾಂಗ್ರೇಸ್ ಪಕ್ಷದವರು ಬೆಂಕಿಗೆ ಹಾಕುತ್ತಿದ್ದರೆ ಈ ಒಂದು ಸಮಯದಲ್ಲಿ ಸ್ಥಳದಲ್ಲಿದ್ದ ನಿಮ್ಮ ಡಿಪಾರ್ಟ್ ಮೆಂಟ್ ನವರು ಏನು ಮಾಡುತ್ತಿದ್ದರು ಕತ್ತೆ ಕಾಯುತ್ತಿದ್ದರಾ ಎನ್ನುತ್ತಾ ತರಾಟೆಗೆ ತಗೆದುಕೊಂಡಿದ್ದಾರೆ. ಹೀಗೆ ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡರು ಕೂಡಾ ಡಿಸಿಪಿ ಯವರು ಸುಮ್ಮನೇ ಏನನ್ನೂ ಉತ್ತರವನ್ನು ನೀಡದೆ ನಿಂತುಕೊಂಡಿದ್ದರು.ಸಧ್ಯ ಈ ಒಂದು ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.