ಆಟೋ ಬಾಡಿಗೆ ವಿಚಾರಕ್ಕೆ ಇಬ್ಬರು ಯುವಕರು ಕಲ್ಲು ಹಾಗು ಬಿಯರ ಬಾಟನಿಂದ ಹೊಡೆದಾಟ

ಹುಬ್ಬಳ್ಳಿಯಲ್ಲಿ ನಿನ್ನೆ ತಡ ರಾತ್ರಿ ಆಟೋ ಬಾಡಿಗೆ ವಿಚಾರಕ್ಕೆ ಯುವಕರ ನಡುವೆ ಹೊಡೆದಾಟ ನಡೆದಿದ್ದು
ಹುಬ್ಬಳ್ಳಿಯ ಮಿರ್ಜಾನಕರ ಪೆಟ್ರೋಲ ಪಂಪ್ ಬಳಿ ರಾತ್ರಿ ಆಟೋ ಬಾಡಿಗೆ ವಿಚಾರಕ್ಕೆ ಆಟೋ ಡ್ರೈವರ್ ಹಾಗು ಪ್ಯಾಸೆಂಜರ್ ನಡುವೆ ಹೊಡೆದಾಟ ನಡೆದಿದ್ದು.
ಇಬ್ಬರು ಕೂಡಾ ಪರಸ್ಪರ ಬಿಯರ ಬಾಟಲಿ ಹಾಗು ಕಲ್ಲಿನಿಂದ ಹೊಡೆದಾಡಿಕೊಂಡಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆಯ ಪೊಲೀಸರು ಹೊಡೆದಾಡಿಕೊಂಡ ಇಬ್ಬರು ಯುವಕರನ್ನ ವಶಕ್ಕೆ ಪಡೆದಿದ್ದು .
ಈ ಒಂದು ಘಟನೆಯಲ್ಲಿ ಓರ್ವ ಯುವಕನಿಗೆ ಗಂಭೀರಗಾಯಗಳಾಗಿದ್ದು .
ಗಾಯಗೊಂಡ ಯುವಕನ್ನು ಪೊಲೀಸರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು
ಇಬ್ಬರು ಯುವಕರ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಪ್ರಾರಂಬಿಸಿದ್ದಾರೆ