ಪೂರ್ವ ಕ್ಷೇತ್ರದಲ್ಲಿ ಮಿತಿ ಮೀರಿದ ನಕಲಿ ಮತದಾರರ ಹಾವಳಿ
ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ೧೫ ದಿನಗಳಲ್ಲಿ ನಕಲಿ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಡದೇ ಇದ್ದರೇ ಬಿಎಲ್‌ಒ (ಬೂತ್ ಲೆವಲ್ ಆಫಿಸರ್) ಮತ್ತು ಚುನಾವಣಾ ವಿಭಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಅವರು, ಶನಿವಾರ ಆಯುಕ್ತರ ಸಮ್ಮುಖದಲ್ಲಿ ಆಯುಕ್ತರ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಅಧಿಕಾರಳನ್ನು ತರಾಟೆಗೆ ತೆಗೆದುಕೊಂಡರು.
ಪೂರ್ವ ವಿಧಾನ ಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ ೬೪ರಲ್ಲಿ ಬರುವ ಬೂತ್ ಸಂಖ್ಯೆ ೪೭ರಲ್ಲಿ ಅಂದಾಜು ೨೦೭ ಮತ್ತು ಬೂತ್ ಸಂಖ್ಯೆ ೩೦ರಲ್ಲಿ ಅಂದಾಜು ೪೨೪ ನಕಲಿ ಮತದಾರರು ಇರುವುದು ಬೆಳಕಿಗೆ ಬಂದಿದೆ. ಆದರೂ ನಕಲಿ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿಲ್ಲ. ರಾಜಕೀಯ ಒತ್ತಡದಿಂದ ಬಿಎಲ್‌ಒ ಮತ್ತು ಮೇಲ್ವಿಚಾರಕರು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.

ಯಾವುದೇ ಒತ್ತಡಕ್ಕೆ ಮಣಿಯದೇ ಸಮೀಕ್ಷೆ ಕೈಗೊಂಡು ೧೫ದಿನಗಳಲ್ಲಿ ನಕಲಿ ಮತದಾರರನ್ನು ಗುರುತಿಸಿ ವರದಿ ಸಲ್ಲಿಸಬೇಕು. ನಿರ್ಲಕ್ಷö್ಯ ವಹಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದರು.

ಕಳೆದ ಐದಾರು ವರ್ಷಗಳಿಂದ ಒಂದೇ ವಾರ್ಡ್ ಮತ್ತು ಬೂತ್‌ಗಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿ.ಎಲ್.ಒಗಳಿಗೆ ಅವರ ವ್ಯಾಪ್ತಿಯಲ್ಲಿ ಬರುವ ಮತದಾರರ ಬಗ್ಗೆ ಇಂಚಿAಚು ಮಾಹಿತಿ ಇರುತ್ತದೆ. ಕ್ಷೇತ್ರ ಬಿಟ್ಟು ಬೇರೆಡೆ ವಾಸವಿದ್ದರೂ ಅಂಥವರನ್ನು ಮತದಾರರ ಪಟ್ಟಿಯಿಂದ ಮಾತ್ರ ಕೈ ಬಿಟ್ಟಿಲ್ಲ. ಬೇರೆಡೆ ವಾಸವಿದ್ದವರೂ ಚುನಾವಣೆ ಬಂದಾಗ ಮಾತ್ರ ಇಲ್ಲಿ ಬಂದ ಮತ ಚಲಾಯಿಸುತ್ತಾರೆ. ಈ ಎಲ್ಲ ಸಂಗತಿಗಳು ಅಧಿಕಾರಿಗಳ ಗಮನಕ್ಕಿದ್ದರೂ ಕೂಡ ಸುಮ್ಮನೆ ಕೂತಿರುವುದು ಖೇದಕರ ಸಂಗತಿ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಶಾಸಕರು, ೬ ತಿಂಗಳಿಗೂ ಹೆಚ್ಚು ಕಾಲ ಯಾವರು ಸ್ಥಳೀಯವಾಗಿ ವಾಸ ವಿರುವುದಿಲ್ಲವೋ ಅಂಥವರನ್ನು ಮತದಾರ ಪಟ್ಟಿಯಿಂದ ನೇರವಾಗಿ ಹೆಸರನ್ನು ತೆಗದು ಹಾಕಬೇಕೆಂದರು.
ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಅವರು ಮಾತನಾಡಿ, ಚುನಾವಣಾ ವಿಭಾಗದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಮುಂದಿನ ೧೦ದಿನಗಳಲ್ಲಿ ನಕಲಿ ಮತದಾರರ ಸಂಪೂರ್ಣ ಪಟ್ಟಿ ಸಲ್ಲಿಸಬೇಕು. ವರದಿಯಲ್ಲಿ ಲೋಪ ಕಂಡು ಬಂದರೇ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಗೋಪಾಲಕೃಷ್ಣ ಹಾಗು ಚುನಾವಣಾ ವಿಭಾಗದ ಅಧಿಕಾರಿಗಳು, ಬಿಎಲ್‌ಒಗಳು, ಮೇಲ್ವಿಚಾರಕರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು ಇದ್ದರು.
