Uncategorized

ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ಹಿಂದೆ ಯಾರಿದ್ದಾರೆ ಗೊತ್ತಾ?

ಈಶ್ವರ್ ಉಳ್ಳಾಗಡ್ಡಿ ಅವರು ಅವಳಿ ನಗರದ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಕೊಂಡಾಗಿನಿಂದಲೂ ಕಮಿಷನರ್ ಡಾ.ಈಶ್ವರ ಸುಮ್ಮನೇ ಕೂರಲಿಲ್ಲ. ನಗರಾಭಿವೃದ್ಧಿ ಇಲಾಖೆಯ ಆಳ ಅಗಲ ಅನುಭವ ಹೊಂದಿದ್ದ ಅವರು, ನಗರ ಜನತ ಆಶೋತ್ತರಳಿಗೆ ಕಿವಿ ಯಾಗಿದ್ದರು.ಅವರು ಕೈಗೊಂಡ
ಹಲವಾರು ದಿಟ್ಟ ಕ್ರಮಗಳಿಂದ ಪಾಲಿಕೆಯು ಹಿಂದೆಂದಿಗಿಂತಲೂ ಅಭಿವೃದ್ಧಿ ಯತ್ತ ದಾಪುಗಾಲು ಹಾಕುತ್ತಿತ್ತು ಅವರ ಕನಸಿನ ಯೋಜನೆಗಳಾದ ನಿರಂತರ ನೀರು ಯೋಜನೆ. ತೆರಿಗೆ ಸಂಗ್ರಹ.ಅವಳಿ‌ನಗರ ಸೌಂದರ್ಯ ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದರು.

ಅವಳಿನಗರದ ಮಹತ್ವಾಕಾಂಕ್ಷೆಯ ನಿರಂತರ ನೀರು ಯೋಜನೆ ಗೆ ತೊಡಕಾಗಿದ್ದ ಭೂ ವಿವಾದ ಬಗೆಹರಿಸಿ ಪೈಪಲೈನ್ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಿಣಾಮ ಶೇ ೨೦ ರಷ್ಟಿದ್ದ ಕಾಮಗಾರಿ ವೇಗ ಹೆಚ್ಚಿಸಿ ಶೆ ೫೦ಕ್ಕೂ ಹೆಚ್ಚು ಪ್ರಗತಿಯಾಗುವಂತೆ ನೋಡಿಕೊಂಡರು. ಪ್ರತಿವಾರ ಬಿಟ್ಟು ಬಿಡದೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ಇದೆಲ್ಲದರ ಪರಿಣಾಮ ಕಾಮಗಾರಿ ಕಲಬುರ್ಗಿ ಹಾಗೂ ಬೆಳಗಾವಿ ನಗರಗಳಿಂದಯೂ ಮುಂದಿದೆ.

ಇನ್ನು ಆಸ್ತಿ ತೆರಿಗೆ ೧೩೦ ಕೋಟಿ ರೂ. ಸಂಗ್ರಹಿಸುವಲ್ಲಿ ಕೈಗೊಂಡ ಕ್ರಮಗಳು ಫಲನೀಡಿದವು.ಪಾಲಿಕೆಯ ಆದಾಯ ಮೂರುಪಟ್ಟು ಅಂದಾಜು ೪೦೦-೪೫೦ ಕೋಟಿ ರೂಪಾಯಿಗಳಿಗೆ
ಹೆಚ್ಚಿಸಲು ದಿಟ್ಟ ಹೆಜ್ಜೆ ಇಟ್ಟು ಬಹುವಷಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ತಿಗಳ ಭೌಗೋಳಿಕ ಸಮೀಕ್ಷೆ ವ್ಯವಸ್ಥೆಯನ್ನು(ಜಿಐಎಸ್) ಜಾರಿಗೊಳಿಸಲು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದು ಸಾಮಾನ್ಯ ಸಾಧನೆಯಲ್ಲ. ಇದು ಡಾ.‌ಈಶ್ವರ ಅವರ ಕಾರ್ಯಕ್ಷಮತೆಗೆ ಕೈಗನ್ನಡಿ.

ಮತ್ತೊಂದು ಮಹತ್ವದ ಕೆಲಸ ಅವಳಿ‌ನಗರ ಸೌಂದರ್ಯ ಮತ್ತು ಸುರಕ್ಷಿತ ಕ್ರಮವಾಗಿ ಅಂದಾಜು ೯೦ ಕೋಟಿ‌ರೂಪಾಯಿಗಳಿಗೂ ಅಧಿಕ ವೆಚ್ಚದಎಲ್ ಇಡಿ ಬೀದಿ ದೀಪ ಯೋಜನೆ. ಟೆಂಡರ್ ಅಂತಿಮ‌ ಹಂತದಲ್ಲಿದೆ. ಇನ್ನು ಕಮಿಷನರ್ ಅವರ ಕಠಿಣ ನಿಲುವುಗಳಿಂದಾಗಿ ಪಾಲಿಕೆಗೆ ಆರ್ಥಿಕ ಉಳಿತಾಯ ತಂದುಕೊಡಲಿದೆ. ಇದರೊಂದಿಗೆ ಜನರ ಬಹು ವರ್ಷಗಳ ಬೇಡಿಕೆ ಈಡೇರಲಿದೆ. ಅವರ ಅಭಿವೃದ್ಧಿ ಯೋಜನೆಗಳೆ ಅವರಿಗೆ ಮುಳುವಾಯಿತಾ ಅಂತಾ ಅನುಮಾನಗಳು ಹೆಚ್ಚಾಗುತ್ತಿವೆ.

ಕಠಿಣ ನಿಲುವುಗಳು ಈಶ್ವರ್ ಉಳ್ಳಾಗಡ್ಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲು ಆಗದ ಪಾಲಿಕೆಯ ಅಧಿಕಾರಿಗಳು ಹಾಗೂ ಪಾಲಿಕೆಯ ಸದಸ್ಯರು ಅವರ ವರ್ಗಾವಣೆಗೆ ಕಾರಣರಾದ ಎಂಬ ಸುದ್ದಿಯು ಪಾಲಿಕೆ ಆವರಣದಲ್ಲಿ ಹರದಾಡುತ್ತಿದೆ ಏನೇ ಆಗಲಿ ಪ್ರಮಾಣಿಕ ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡ ಪಾಲಿಕೆಗೆ ಅಭಿವೃದ್ಧಿಯ ಪಥದಲ್ಲಿ ಸಾಗಲು ಈಗ ಬಂದಿರುವ ಹೊಸ ಆಯುಕ್ತರು ಈಶ್ವರ್ ಉಳ್ಳಾಗಡ್ಡಿ ಅವರು ರೂಪಿಸಿದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!