ಭಲೇ ಭಲೇ ಏನು ನಿನ್ನ ವೇಷ ಬುರ್ಖಾ ಧರಿಸಿ ಸಿಕ್ಕಿ ಹಾಕಿ ಕೊಂಡೆಯಾ ವೀರಭದ್ರ

ಉಚಿತ ಬಸ್ ಪ್ರಯಾಣಕ್ಕಾಗಿ ಈ ರೀತಿ ಮಹಿಳೆಯರಂತೆ ವೇಷ ತೊಟ್ಟಿದ್ದೀಯಾ ಎಂದು ಸಾರ್ವಜನಿಕರ ತರಾಟೆ
ಆದ್ರೆ ತಾನು ಭಿಕ್ಷಾಟನೆಗಾಗಿ ಈ ರೀತಿ ವೇಷ ತೊಟ್ಟಿರುವುದಾಗಿ ಹೇಳಿಕೊಂಡಿರೋ ವೀರಭದ್ರಪ್ಪ
ಹಲವಾರು ಅನುಮಾನಕ್ಕೆಡೆಮಾಡಿಕೊಟ್ಟ ವೀರಭದ್ರಪ್ಪ ವರ್ತನೆ
ಸ್ಥಳದಲ್ಲಿಯೇ ಬುರ್ಖಾ ಬಿಚ್ಚಿಸಿರೋ ಸಾರ್ವಜನಿಕರು
ಕೊನೆಗೆ ಪೊಲೀಸರ ಕೈಗೊಪ್ಪಿಸಿರೋ ಸಾರ್ವಜನಿಕರು
ಕುಂದಗೋಳ ಪೊಲೀಸರಿಂದ ವೀರಭದ್ರಪ್ಪ ವಿಚಾರಣೆ
ವೀರಭದ್ರಪ್ಪ ರೈಲು ಮೂಲಕ ಬೆಂಗಳೂರಿನಿಂದ ಸಂಶಿಗೆ ಬಂದಿರೋ ಮಾಹಿತಿ
ರೈಲಿನಲ್ಲಿ ಬ್ಯಾಗೊಂದರಲ್ಲಿ ಬುರ್ಖಾ ಸಿಕ್ಕಿದೆ
ಅದನ್ನೇ ಆತ ಹಾಕಿಕೊಂಡು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಅಂತ ಪೊಲೀಸರ ಮಾಹಿತಿ
ಪೊಲೀಸರಿಂದ ವೀರಭದ್ರಪ್ಪ ವಿಚಾರಣೆ ಮುಂದುವರಿಕೆ.
ವಿಚಿತ್ರ ಘಟನೆಗೆ ಸಾಕ್ಷಿಯಾದ ಧಾರವಾಡ ಜಿಲ್ಲೆ ಕುಂದಗೋಳದ ಸಂಶಿ
ಉದರ ನಿಮಿತ್ತಂ ಬಹುಕೃತ ವೇಷಂ ಅನ್ನೋ ಮಾತಿದೆ
ಸದ್ಯ ಶಕ್ತಿ ಯೋಜನೆ ಲಾಭಕ್ಕಾಗಿ ಬಹುಕೃತ ವೇಷಂ ಅನ್ನುವಂತಾಗಿದೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಲಾಭಕ್ಕಾಗಿ ಪುರುಷನ ಬಹುಕೃತ ವೇಷ
ಬುರ್ಖಾ ಧರಿಸಿ ತಗ್ಲಾಕ್ಕೊಂಡ ವ್ಯಕ್ತಿ
ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ನಡೆದ ಘಟನೆ
ವೀರಭದ್ರಯ್ಯ ನಿಂಗಯ್ಯ ಮಠಪತಿ ಹೀಗೆ ಸಿಕ್ಕಿಬಿದ್ದಿರೋ ಪುರುಷ
ವೀರಭದ್ರಯ್ಯ ಸಿಂಧಗಿ ತಾಲೂಕಿನ ಘೋಡಗೋರಿ ನಿವಾಸಿ
ಉಚಿತ ಬಸ್ ಪ್ರಯಾಣಕ್ಕಾಗಿ ಬುರ್ಖಾ ಧರಿಸಿ ಸಿಕ್ಕಿಬಿದ್ದ ವೀರಭದ್ರಯ್ಯ
ಸಂಶಿ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರೋ ವೀರಭದ್ರಯ್ಯ
ಬುರ್ಖಾ ಧರಿಸಿ ಕುಳಿತಿದ್ದ ವ್ಯಕ್ತಿಯನ್ನ ನೋಡಿ ಅನುಮಾನಗೊಂಡ ಸಾರ್ವಜನಿಕರು
ಆತನನ್ನು ಹಿಡಿದು ವಿಚಾರಿಸಿದಾಗ ವಿಷಯ ಬೆಳಕಿಗೆ
ವೀರಭದ್ರಯ್ಯ ಬಳಿ ಮಹಿಳೆಯ ಆಧಾರ್ ಕಾರ್ಡ್ ಝರಾಕ್ಸ್ ಪತ್ತೆ