4 ದಿನದಲ್ಲಿ ಹಣ ಸಮೇತ ಕಳ್ಳನನ್ನು ಹೆಡೆಮುರಿ ಕಟ್ಟಿದ ಉಪನಗರ ಪೊಲೀಸರು

ಹುಬ್ಬಳ್ಳಿ: ಹುಬ್ಬಳ್ಳಿ ಉಪನಗರ ಪೊಲೀಸರ ಭರ್ಜರಿ ಬೇಟೆ. ಇಲ್ಲಿನ ಹಳೇ ಬಸ್ಸ ನಿಲ್ದಾಣದ ಹತ್ತಿರದ ಹತ್ತಿರ ಇರುವ ಮಂತ್ರಾ ರೆಸಿಡೆನ್ಸಿ ಹತ್ತಿರ ಕಳೆದ ದಿನಾಂಕ 26 ರಂದು ಸುನೀಲ ರಾಮಕೃಷ್ಣ ಜಾಡ್ ಅವರು ತಮ್ಮ್ ಸ್ಕೊಟರದಲ್ಲಿ 8 ಲಕ್ಷ ಹಣವನ್ನು ಕಳ್ಳತನ ಮಾಡಿಕಂಡು ಪರಾರಿಯಾಗಿದ್ದರು ಅಂತಾ ಈ ಬಗ್ಗೆ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು

ಇನ್ನೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಉಪನಗರ ಠಾಣೆ ಪೋಲಿಸರು ಕಳತನದಲ್ಲಿ ಭಾಗಿಯಾಗಿದ್ದ ಗಿರಣಿ ಚಾಳ. ನಿವಾಸಿ ಆದ ನಿಖಿಲ್ ರಮೇಶ ಮೂರ್ಕಿಬಾವಿ ಎಂಬ ಒಬ್ಬ ಕಳ್ಳನನ್ನು ಕೇವಲ ಕಳ್ಳತನ ಮಾಡಿದ 4 ದಿನದಲ್ಲಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿಯಿಂದ 7.97.000 ನಗದು ಹಣವನ್ನು ವಶಕ್ಕೆ ಪೋಲಿಸರು ಪಡೆದುಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತರದ ರೇಣುಕಾ ಸುಕುಮಾರ ಇವರ ನೇತೃತ್ವದಲ್ಲಿ ಡಿಸಿಪಿಗಳಾದ ರಾಜೀವ ಎಮ್ . ರವೀಶ ಸಿ ಅರ್ .ಎಸಿಪಿ ಬಾಳಪ್ಪ ನಂದಗಾವಿ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ ಆದ ಎಮ್ ಎಸ್ ಹೂಗಾರ ಇವರ ನೇತೃತ್ವದಲ್ಲಿ ಪಿಎಸಐ ಮಲ್ಲಿಕಾರ್ಜುನ ಹೊಸುರ ಜೊತೆಯಲ್ಲಿ ಸಿಬ್ಬಂದಿಗಳಾದ ಶ್ರೀನಿವಾಸ್ ಯರಗುಪ್ಪಿ. ಮಂಜುನಾಥ ಹಾಲರವ. ರೇಣಪ್ಪ ಸಿಕ್ಕಲಗೇರ. ಪ್ರಕಾಶ ಕಲಗುಡಿ. ಜ್ಞಾನೇಶ ಮಾಂಗ್. ಎಸ್ ಬಿ ಯಳವತ್ತಿ.ತರುಣ ಗಡ್ಡದವರ. ಆರೂಢ ಕರೆಣ್ಣವರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಆಯುಕ್ತರು ಶ್ಲಾಘಿಸಿರುತ್ತಾರೆ