ವಿನಾಕರಣ ಎರಡು ಗುಂಪುಗಳ ನಡುವೆ ಗಲಾಟೆ: ಹುಬ್ಬಿನೊಳಗೆ ಚಾಕು ಹಾಕಿದ ಯುವಕರು

ಧಾರವಾಡ: 11 ದಿನದ ಗಣಪತಿ ವಿಸರ್ಜನೆ ವೇಳೆ ಧಾರವಾಡದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆಯುಂಟಾಗಿದ್ದು, ಪ್ರಜ್ವಲ್ ಎಂಬ ಯುವಕನಿಗೆ ಚಾಕು ಇರಿಯಲಾಗಿದೆ.ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

ಧಾರವಾಡದ ಆಂಜನೇಯನಗರದಲ್ಲಿ ಈ ಗಲಾಟೆ ಸಂಭವಿಸಿದ್ದು, ಪ್ರಜ್ವಲ್ ಎಂಬ ಯುವಕನ ಕಣ್ಣಿನ ಹುಬ್ಬಿಗೆ ಚಾಕು ಹಾಕಿದ ಯುವಕರು ಪರಾರಿ ಆಗಿದ್ದು ಇನ್ನು ಹಲ್ಲೆಗೆ ಒಳಗಾದ ಯುವಕನನ್ನು ಉಪನಗರ ಪೋಲೀಸರು ಹುಬ್ಬಳ್ಳಿಯ. ಕಿಂಸಗೆ ಚಿಕಿತ್ಸೆಗೆ ರವಾನಿಸಿ ಅರೋಪಿಗಳಿಗಾಗಿ ಜಾಲ ಬಿಸಿದ್ದಾರೆ
ಎರಡು ಗುಂಪುಗಳ ಮಧ್ಯೆ ಯಾವ ಕಾರಣಕ್ಕೆ ಜಗಳ ಸಂಭವಿಸಿತು ಎಂಬುದು ಗೊತ್ತಾಗಿಲ್ಲ. ಆದರೆ, ಮೂರ್ನಾಲ್ಕು ಜನ ಸೇರಿಕೊಂಡು ಪ್ರಜ್ವಲ್ ಎಂಬ ಯುವಕನ ಕಣ್ಣಿನ ಹುಬ್ಬಿಗೆ ಚಾಕು ಇರಿಯಲಾಗಿದ್ದು, ಆತನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಇನ್ನು ಈ ಕುರಿತು ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ