ಜನತಾ ಬಜಾರ ಹೊಸ ಕಟ್ಟಡದಲ್ಲಿ ಕೊಳೆತ ಮೃತ ದೇಹ ಪತ್ತೆ .ಇದು ಕೊಲೆನಾ ?

ಹುಬ್ಬಳ್ಳಿಯ ಜನತಾ ಬಜಾರ್ ಹೊಸ ಕಟ್ಟಡದ ಕೆಳಗೆ ಕೋಣೆ ಒಂದರಲ್ಲಿ ಒಬ್ಬ ಯುವಕನ ಮೃತದೇಹ ಪತ್ತೆಯಾಗಿದೆ. ನೀರಿನಲ್ಲಿ ಅರ್ಧ ದೇಹ ಬಿದ್ದು ಕೊಳೆತು ದುರ್ವಾಸನೆ ಬಂದಿದ್ದರಿಂದ ಅಲ್ಲಿನ ಸ್ಥಳಿಯರು ಹೋಗಿ ನೋಡಿದಾಗ ಶವ ಪತ್ತೆಯಾಗಿದೆ ಇನ್ನು ಕೂಡಲೇ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು. ಕೂಡಲೆ ಸ್ಥಳಕ್ಕೆ ಆಗಮಿಸಿದ ಉಪನಗರ ಪೊಲೀಸ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು ಮೃತ ದೇಹವನ್ನು ಕಿಮ್ಸ್ನ ಶವಗಾರಕೆ ಸಾಗಿಸಿದ್ದು ಇನ್ನು ತನಿಖೆ ನಂತರವೇ ಇದು ಕೊಲೆನಾ ಅಥವಾ ಮೇಲಿಂದ ಬಿದ್ದು ಮೃತಪಟ್ಟಿದ್ದಾ ಅಂತ ತಿಳಿಯಬೇಕಿದೆ