ಧಾರವಾಡ ಜಿಲ್ಲೆಯಲ್ಲಿ ಎರಡು ದಿನ ಸರಾಯಿ ನಿಷೇಧ . ಇಂದು ಸಂಜೆಯಿಂದ ಬಾರ ಬಂದ

ಶ್ರೀರಾಮಜನ್ಮಭೂಮಿ ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ, ದೇಶಾದ್ಯಂತ ಹಬ್ಬದ ವಾತಾವರಣ ಕಂಡು ಬರುತ್ತಿದೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಇಂದು ಸಂಜೆ 6 ಗಂಟೆಯಿಂದ 23 ರ ಮುಂಜಾನೆ 9 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇನ್ನು ಈ ಕುರಿತು ಅಧಿಕೃತ ಆದೇಶದ ಪ್ರತಿ ನಮ್ಮ್ ಪಬ್ಲಿಕ್ ಸಿಲ್ವರ ನ್ಯೂಸ್ ಗೆ ಲಭ್ಯ ವಾಗಿದೆ.

ರಾಮ ಮಂದಿರ ಲೋಕಾರ್ಪಣೆಗಾಗಿ ನಾಳೆ ನಡೆಯಲಿರುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ಒಂದು ದಿನದ ಸರ್ಕಾರಿ ರಜೆ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಅರ್ಧ ದಿನ ರಜೆ ನೀಡಿದೆ. ಬಿಜೆಪಿಯೇತರ ಆಡಳಿತದ ಸರ್ಕಾರಗಳು ಕೆಲವು ಕಡೆ ರಜೆ ನೀಡಿದರೆ, ಇನ್ನೂ ಕೆಲವೆಡೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಟಸ್ಥವಾಗಿವೆ.