Uncategorized

ಕಲಘಟಗಿ ಪೊಲೀಸರ ಭರ್ಜರಿ ಭೇಟೆ ಎಟಿಎಂ ಕಳ್ಳನ ಬಂಧನ ನಗದು ಹಾಗು ಕಾರ ವಶ

ಕಲಘಟಗಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಎಟಿಎಂ ಕಳ್ಳತನ ಮಾಡಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಕಲಘಟಗಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಠಾಣೆಯ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಅವರ ನೇತೃತ್ವದ ತಂಡವು ಪ್ರಕರಣವನ್ನು ಬೇಧಿಸಿದ್ದು, ಹುಬ್ಬಳ್ಳಿ ಹಳೇ ಹುಬ್ಬಳ್ಳಿ ನಿವಾಸಿ ಆಸ್ಪಕ ತಳವಾಯಿ ಎಂಬಾತನನ್ನು ಬಂಧನ ಮಾಡಿದ್ದು, ಆತನಿಂದ 15000 ನಗದು ಹಾಗೂ ಒಂದು ಕಾರ್ ವಶಪಡಿಸಿಕೊಳ್ಳಲಾಗಿದೆ.

ಎಸ್ ಪಿ ಗೋಪಾಲ್ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಠಾಣೆಯ ಇನ್ಸಪೆಕ್ಟರ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ

ಪಿ ಎಸ್ ಐ ಕರಿವಿರಪನವರ ,ಬಸವರಾಜ್,ಯದಲಾಗುಡ್, ಎಎಸ್‌ಐ‌ ಎ ಎಮ್‌ ನವಲೂರ ಹಾಗು ಸಿಬ್ಬಂದಿಗಳಾದ ಮಾಂತೇಶ ನಾನಾಗೌಡ ,ಹುಶೇನ ಯಲಿಗಾರ, ಅಭಿನಂದನ ,ಗೋಪಾಲ್ ಪೀರಗಿ, ಮಲ್ಲಿಕಾರ್ಜುನ್ ಸಜ್ಜನ್, ಹಾಗೂ ಯಶವಂತ ,,ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇ‌ನ್ನು ಇವರ ಕಾರ್ಯಾಚರಣೆಗೆ ಮೆಚ್ಚಿ ಎಸ್ ಪಿ ಗೋಪಾಲ ಬ್ಯಾಕೋಡ ಅವರು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!