Uncategorized

ಹೋಮ ನರ್ಸ ನೆಪದಲ್ಲಿ ಬಂಗಾರ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳಿಯ ಬಂಧನ

ಹುಬ್ಬಳ್ಳಿ: ಹೋಮ್ ನರ್ಸ್ ಕೆಲಸಕ್ಕೆ ಬಂದು ಮನೆಯಲ್ಲಿದ್ದ 6 ಲಕ್ಷ ರೂ. ಮೌಲ್ಯದ ಬಂಗಾರದ ಬಳೆಗಳನ್ನು ಕದ್ದು ಪರಾರಿಯಾಗಿದ್ದ ಚಾಲಕಿ ಕಳ್ಳಿಯನ್ನು ಬಂದಿಸುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿದ್ಯಾನಗರ ಲಿಂಗರಾಜನಗರದ ಶಿವಾನಂದ ಕೊಟ್ಟರಶೆಟ್ಟರ್ ಇವರ ಮನೆಯಲ್ಲಿ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ಹೋಮ್ ನರ್ಸ್ ಕೆಲಸಕ್ಕೆ ಜಾಹ್ನವಿ ಎಂಬ ಮಹಿಳೆಯನ್ನು ಕೆಲಸಕ್ಕೆ ನೆಮಿಸಿದ್ದು ಇನ್ನು ಜಾಹ್ನವಿ ಮನೆಯಲ್ಲಿದ್ದ 6 ಲಕ್ಷ ರೂ. ಮೌಲ್ಯದ ಬಂಗಾರದ ಬಳೆಗಳನ್ನು ಯಾರಿಗು ತಿಳಿಯದ ಹಾಗೆ ಕದ್ದು ಮಳ್ಳಿಯಂತೆ‌ ಪರಾರಿಯಾಗಿದ್ದಳು. ಇನ್ನು ಬಂಗಾರದ ಬಳೆಗಳು ಕಾಣದಿದ್ದಾಗ ಮನೆಯವರು ಈ ಕುರಿತಂತೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದಾಗ ಖಚಿತ ಮಾಹಿತಿ ಮೇರೆಗೆ ಧಾರವಾಡದ ಗಾಂಧಿ ಚೌಕ ಹತ್ತಿರ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ 3,50,000 ರೂ. ಮೌಲ್ಯದ 4 ಬಂಗಾರದ ಬಳೆಗಳ ಕಳ್ಳತನ ಮಾಡಿದ್ದಾಗಿ ತಿಳಸಿದ್ದು ಇನ್ನು ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಲಾಗಿದೆ.

ಇನ್ನು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ. ಡಿಸಿಪಿಗಳಾದ ಎಂ.ರಾಜೀವ್, ರವೀಶ್ ಸಿ.ಆರ್, ಎಸಿಪಿ ನಂದಗಾವಿ ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಂತಿ ಗೌಳಿ ಇವರ ನೇತೃತ್ವದಲ್ಲಿ ಪಿಎಸ್ಐಗಳಾದ ಶ್ರೀಮಂತ ಹುಣಸಿಕಟ್ಟಿ, ಬಿ.ಎನ್.ಕಲ್ಯಾಣಿ,ಜೊತೆಗೆ ಸಿಬ್ಬಂದಿಗಳಾದ ಶಿವಾನಂದ ತಿರಕಣ್ಣವರ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಪರಶುರಾಮ ಹಿರಗಣ್ಣವರ, ಸಯ್ಯದ್ ಅಲಿ ತಹಶಿಲ್ದಾರ, ರಮೇಶ್ ಹಲ್ಲೆ, ಮಂಜುನಾಥ ಏಣಗಿ, ಶರಣಗೌಡ ಮೂಲಿಮನಿ ಇವರು ಇ ಒಂದು ಕಾರ್ಯಾಚರಣೆ ನಡೆಸಿ‌ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನು ಇ ಒಂದು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ ವಿದ್ಯಾನಗರ ಪೊಲೀಸರಿಗೆ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!