ಕಿಮ್ಸ್ ಆಸ್ಪತ್ರೆಯ ಚರಂಡಿಯಲ್ಲಿ ವ್ಯಕ್ತಿಯೋರ್ವನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ವ್ಯಕ್ತಿಯೋರ್ವನ ದೇಹದ ಹಾಗೆ ಕಾಣುತ್ತಿರುವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಕಿಂಸನ ಆವರಣದಲ್ಲಿ ಇದ್ದ ನಂದಿನಿ ಹಾಲಿನ ಅಂಗಡಿ ಹಿಂದೆ ಇರುವ ಮಹಿಳಾ ಹಾಸ್ಟೆಲ್ ಹಿಂಭಾಗದಲ್ಲಿನ ಚರಂಡಿಯನ್ನು ಸ್ವಚ್ಚತೆ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಲಿನ ಮಾಡುವ ಸಿಬ್ಬಂದಿಗೆ ಅಸ್ಥಿಪಂಜರದ ಮೂಳೆ ಹಾಗೂ ತಲೆ ಬುರುಡೆ ಕಂಡಿದ್ದು. ಕೂಡಲೆ ಆ ಸಿಬ್ಬಂದಿ ವಿದ್ಯಾನಗರ ಪೊಲೀಸರಿಗೆ ಈ ಕುರಿತು ಮಾಹಿತಿ ನಿಡಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು .

ಕಳೆದ ಐದಾರು ತಿಂಗಳು ಹಿಂದೆ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು,ಪತ್ತೆ ಆದ ಮೃತ ವ್ಯೆಕ್ತಿಯ ಅಸ್ಥಿಪಂಜರದ ಮೇಲೆ ಇರುವ ಬಟ್ಟೆಯಲ್ಲಿ ಪಿಓಪಿ ಫೌಡರ್ ಇದ್ದು, ಅದರಳೊಗೆ ಮೂಳೆಗಳು ಪತ್ತೆಯಾಗಿದೆ.
ಇದು ನಿಜವಾಗಿ ಮನುಷ್ಯನ ದೇಹಾನಾ ಅಂತಾ ತನಿಖೆಯಿಂದ ತಿಳಿದು ಬರಬೇಕಿದೆ .