ಕಾರ್ಮಿಕರ ಮಾರಾಮಾರಿ ನಾಲ್ಕು ಜನರನ್ನು ಬಂಧಿಸಿದ ಕಸಬಾಪೇಟೆ ಪೊಲೀಸರು

ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಡನಾಳ-ಗಬ್ಬೂರ ರಸ್ತೆಯಲ್ಲಿರುವ ಕೆಎಲ್ಇ ಮೆಡಿಕಲ್ ಕಾಲೇಜು ಆವರಣದಲ್ಲಿ ಕಾರ್ಮಿಕರ ನಡುವೆ ನಡೆದ ಮಾರಾಮಾರಿ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಹನಿಂಗ ನಂದಗಾವಿ ಹೇಳಿದರು.

ಬುಧವಾರ ಮಧ್ಯಾಹ್ನ ನೀರಿನ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಬಿಹಾರ ಮೂಲದ ಸಂತೋಷ (54), ಬಚ್ಚು 40, ಬಿಕ್ರಮ (34) ಎಂಬಾತರು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಪ್ರಕರಣವನ್ನು ತನಿಖೆ ನಡೆಸಿರುವ ಕಸಬಾ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ್ ಅಂಡ್ ಟೀಮ್ ಹಲ್ಲೆ ನಡೆಸಿದ್ದ ಸುಗ್ರಿವ್, ರವೀಂದರ, ಶಿವಕುಮಾರ್, ಗೋವಿಂದ ಎಂಬಾತರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ