ಹುಬ್ಬಳ್ಳಿಯ ಕೆ ಇ ಬಿ ನಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ ರೀತಿಯಲ್ಲಿ ವ್ಯಕ್ತಿ ಶವ ಪತ್ತೆ…

ಹುಬ್ಬಳ್ಳಿ: ಯುವಕನೊರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ಗಂಗಾಧರ ನಗರ (ಸೆಟ್ಲಮೆಂಟ್) ಬಳಿಯಲ್ಲಿ ನಡೆದಿದೆ.

ರಮೇಶ ಬಿಜವಾಡ (45) ಮೃತ ದುರ್ದೈವಿಯಾಗಿದ್ದು, ಈತ ಕೆಇಬಿ ಕಾಂಪೌಂಡ್ ಬಳಿಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಈ ಸಾವಿನಲ್ಲಿ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದು, ಇದು ನಿಜವಾಗಿಯೂ ಆತ್ಮಹತ್ಯೆಯೋ? ಅಥವಾ ಕೊಲೆಯೋ ಎಂದು ಅನುಮಾನಿಸುತ್ತಿದ್ದಾರೆ.

ಸದ್ಯ ಸ್ಥಳಕ್ಕೆ ಬೆಂಡಿಗೇರಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದು, ಮೃತ ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನಷ್ಟೇ ಈ ಬಗ್ಗೆ ಪೋಲಿಸರು ಸಾವಿನ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಸಬೇಕಿದೆ.