ಎ ಎಸ್ ಐ ಜೊತೆಗೆ ಐದು ಪೊಲೀಸ ಸಿಬ್ಬಂದಿಯಿಂದ ಹವ್ಯಾಸಿ ಪತ್ರಕರ್ತನ ಮೇಲೆ ದರ್ಪ ಹಿಗ್ಗಾ ಮುಗ್ಗಾ ಥಳಿತ

ಹವ್ಯಾಸಿ ಪತ್ರಕರ್ತರೊರ್ವರ ಮೇಲೆ ಎಎಸ್ಐವೊಬ್ಬರು ದರ್ಪ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಭರತ್ ತುಳಜಾಸಾ ಕಾಟವೆ ಎಂಬಾತರೇ ಪೊಲೀಸರಿಂದ ಥಳಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದು, ಕಮರಿಪೇಟೆ ಪೊಲೀಸ್ ಠಾಣೆಯ ಎಎಸ್ಐ ಪತ್ತಾರ ಸೇರಿದಂತೆ ಮತ್ತೆ ಕೆಲವು ಸಿಬ್ಬಂದಿಗಳು ಸುಖಾಸುಮ್ಮನೆ ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದು, ದಾರಿಯುದ್ದಕ್ಕೂ ಮನಬಂದಂತೆ ಥಳಿಸಿದ್ದಾರಂತೆ.
ಅಷ್ಟೇ ಅಲ್ಲದೇ ಠಾಣೆಯಲ್ಲಿ ಮತ್ತಷ್ಟು ಅಮಾನವೀಯವಾಗಿ ಥಳಿಸಿದ್ದಾರಂತೆ. ಬಳಿಕ ಯಾವ ಕಾರಣಕ್ಕಾಗಿ ಠಾಣೆಗೆ ಕರೆದುಕೊಂಡು ಬಂದಿದ್ದೀರಿ? ಯಾವ ಕಾರಣಕ್ಕಾಗಿ ಹೊಡೆದೀರಿ? ಎಂದು ಭರತ್ ಕೇಳಿದಾಗ ಮತ್ತಷ್ಟು ಥಳಿಸಿದ್ದಾರೆಂದು ಭರತ್ ತಿಳಿಸಿದ್ದಾರೆ.
ಸಾರ್ವಜನಿಕ ಬದುಕಿನಲ್ಲಿರುವ ಜನರಿಗೆ ಹೀಗಾದರೇ ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗೆ? ಎಂಬ ಪ್ರಶ್ನೆಯನ್ನು ಜನರು ಕೇಳುವಂತಾಗಿದೆ.
ಸದ್ಯ ಈ ಘಟನೆ ಕುರಿತು ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ವಿಷಯವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರುತ್ತಿದ್ದಂತೆಯೇ ಕಮೀಷನರ್ ಎನ್.ಶಶಿಕುಮಾರ್ ಹವ್ಯಾಸಿ ಪತ್ರಕರ್ತನನ್ನು ಥಳಿಸಿದ ಎಎಸ್ಐ ಪತ್ತಾರ್ ಎಂಬಾತರನ್ನು ಅಮಾನತು ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಲು ಉತ್ತರ ಉಪವಿಭಾಗದ ಎಸಿಪಿ ಅವರನ್ನು ನೇಮಕ ಮಾಡಲಾಗಿದೆ.ಇನ್ನು ಎ ಎಸ್ ಐ ಜೊತೆಯಲ್ಲಿ ಇದ್ದ ೫ ಪೊಲೀಸ ಸಿಬ್ಬಂಗಳಿಗೆ ಅಮಾನತ್ತು ಮಾಡತ್ತಾರಾ ಅಂತಾ ಕಾದು ನೋಡಬೇಕಿದೆ