ಚನ್ನಮ್ಮ ಸರ್ಕಲ್ ಬಳಿ ಆಟೋ ಚಾಲಕರ ಅಟ್ಟಹಾಸ; ಬಸ್ಸಿಗೂ ಜಾಗ ಬಿಡದೆ ರಸ್ತೆ ಅಡ್ಡಗಟ್ಟಿ ಎನು ಮಾಡಿದ್ದಾರೆ ನೋಡಿ!

ಹುಬ್ಬಳ್ಳಿ: ಚನ್ನಮ್ಮ ಸರ್ಕಲ್ ಪೆಟ್ರೋಲ್ ಬಂಕ್ ಬಳಿ ಆಟೋ ಚಾಲಕರ ಅಟ್ಟಹಾಸ ಮಿತಿಮಿರಿದೆ. ಬಸ್ಸಗಳಿಗೂ ಜಾಗ ಬಿಡದೆ ಅಡ್ಡಗಟ್ಟಿ ನಿಲ್ಲುತ್ತಿದ್ದಾರೆ. ಹಿಂದೆ ಟ್ರಾಫಿಕ್ ಜಾಮ್ ಆದ್ರು ಸಂಚಾರಿ ಪೊಲೀಸರು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಪೊಲೀಸ್ ಅಧಿಕಾರಿಗಳೇ ನೀವೆ ನೋಡಿ,,, ಬಸ್ ಚಾಲಕರು ಎಷ್ಟು ಹಾರ್ನ್ ಹಾಕಿದ್ರು ದಾರಿ ಬಿಡದ ಆಟೋ ಚಾಲಕರು ಬೇಕಾ ಬಿಟ್ಟಿಯಾಗಿ ಆಟೋ ನಿಲ್ಲಿಸಿದ್ದಾರೆ. ಇದು ಚನ್ನಮ್ಮ ಸರ್ಕಲ್ ಬಳಿ ಇರುವ ಪೆಟ್ರೋಲ್ ಬಂಕ್ ಇಂತಹ ಘಟನೆಗಳು ದಿನಂಪ್ರತಿ ನಡೆಯುತ್ತಿವೆ. ಮೊದಲೇ ಚನ್ನಮ್ಮ ಸರ್ಕಲ್ ಹೃದಯ ಭಾಗ ಎಲ್ಲೆ ಹೋಗಬೇಕಾದ್ರುಒಂದೇ ಮಾರ್ಗ. ಇಲ್ಲಿ ಟ್ರಾಫಿಕ್ ಆದ್ರೆ ದೊಡ್ಡ ಹೈರಾಣ ಆಗುತ್ತದೆ. ಹೀಗೆ ಬೇಕಾಬಿಟ್ಟಿಯಾಗಿ ಆಟೋ ನಿಲ್ಲಿಸಿದ್ರು ಉತ್ತರ ಸಂಚಾರಿ ಪೊಲೀಸರು ಮಾತ್ರ ದಂಡ ಹರಿಯಲು ಫುಲ್ ಬಿಜಿಯಾಗಿದ್ದಾರೆ.
ಅಷ್ಟೇ ಅಲ್ದೆ ಚನ್ನಮ್ಮ ಸರ್ಕಲ್ ಬಳಿ ಪೂರ್ವ ಸಂಚಾರಿ ಪೊಲೀಸರು ಮತ್ತ ಉತ್ತರ ಸಂಚಾರಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಆಟೋದವರಿಗೆ ಯಾವುದೇ ರೀತಿಯ ಕಡಿವಾಣ ಹಾಕುತ್ತಿಲ್ಲ. ಟ್ರಾಫಿಕ್ ಪೊಲೀಸರು ದಂಡ ಹಾಕುವುದರಲ್ಲೆ ಸ್ತಬ್ಧವಾಗಿದ್ದಾರೆ. ಹೊರತು ಇಂತಹ ಟ್ರಾಫಿಕ್ ಕ್ಲೀಯರ್ ಮಾಡಲು ಬರುತ್ತಿಲ್ಲ. ಮೇಲಾಧಿಕಾರಿಗಳೆ ನೀವಾದ್ರು ಇತ್ತ ಗಮನಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ.