ಹೊಸ ವರ್ಷ ಹುಬ್ಬಳ್ಳಿಯ ಲಾಡ್ಜನಲ್ಲಿ ನೇಣಿಗೆ ಶರಣಾದ ವ್ಯಕ್ತಿ.

ಅವಳಿ ನಗರದಲ್ಲಿ ಹೊಸ ವರ್ಷವನ್ನು ಸಂಭ್ರಮ ಸಡಗರ ದಿಂದ ಆಚರಣೆ ಮಾಡಲಾಗಿತ್ತು.ಪೋಲಿಸರು ಕೂಡಾ ಸೂಕ್ತ ಬದೋಬಸ್ತ ನೀಡಿ ಯಾವುದೇ ಅವಗಡ ಸಂಬವಿಸದಂತೆ ನೋಡಿಕೊಂಡಿದ್ದರು.ಆದರೆ ಹೊಸ ವರ್ಷ ಹಿಂದಿನ ರಾತ್ರಿ ಪೋಲಿಸರಿಗೆ ಮತ್ತೊಂದು ತಲೆ ಬಿಸಿಯಾಗುವ ಕೇಸ್ ಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ನಗರದ ಉಪನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಲಾಡ್ಜ ಒಂದರಲ್ಲಿ ವ್ಯಕ್ತಿಯೋರ್ವನೊಬ್ಬ ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ..ಚನ್ನಮ್ಮಾ ವೃತ್ತದಿಂದ ಸ್ಚಲ್ಪ ದೂರದಲ್ಲಿರುವ ಸಂಗಮ ಲಾಡ್ಜ್ ದಲ್ಲಿ ಕಲಘಟಗಿ ತಾಲೂಕಿನ ಕಂಪ್ಲಿಕೊಪ್ಪಾ ಗ್ರಾಮದ ನಿವಾಸಿ ಸಂತೋಷ ಯಲ್ಲಪ್ಪ ಹರಿಜನ ಲಾಡ್ಜ್ ನ ಬೆಡಶೀಟ್ ಬಳಸಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಸಂತೋಷ ವೃತ್ತಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.ಕಳೆದ ಡಿಸೆಂಬರ್ 19 ರಂದು ಸಂಗಮ ಲಾಡ್ಜ್ ನಲ್ಲಿ 302 ರಲ್ಲಿ ರೂಂ ಬುಕ್ಕ ಮಾಡಿದ್ದು ಇತನ ಮೇಲೆ ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣಕ್ಕೆ ಸಂಭಂಧಿಸಿದಂತೆ ಜಾಮೀನಿನ ಮೇಲೆ ಹೊರಗೆ ಬಂದಿದ್ದು.

ಇನ್ನೊಂದು ಸಂಗತಿ ಎಂದರೆ ಕಳೆದ ಕೆಲ ತಿಂಗಳುಗಳಿಂದ ಸಂತೋಷನಿಗೆ ಲವ್ ಫೇಲಿವರ್ ಕೂಡಾ ಆಗಿತ್ತು.ಇದೂ ಕೂಡಾ ಇತನ ಆತ್ಮಹತ್ಯೆಗೆ ಪ್ರಾಥಮಿಕವಾಗಿ ಕಾರಣವೇ ಎನ್ನುವ ಅನುಮಾನಗಳು ಎಡೆ ಮಾಡಿಕೊಡುತ್ತವೆ…
ಇನ್ನೂ ನಾಲ್ಕೂ ದಿನವಾದರೂ ಸಂತೋಷ ರೂಮ‌್ ನಿಂದ ಹೊರ ಬರದೆ ಇದ್ದುದು ಕಂಡ ಲಾಡ್ಜ್ ನ ಸಿಬ್ಬಂದಿಗಳು ರೂಮ್ ತುಂಬಾ ಗಬ್ಬು ವಾಸನೆ ಬರುತ್ತಿದೆ ಎಂದು ರೂಮ್ ತೆರೆದಾಗ ಖಂಡಿದೆ ಸಂತೋಷನ ಆತ್ಮಹತ್ಯೆ…
ಈ ವಿಷಯ ತಿಳಿದ ಹುಬ್ಬಳ್ಳಿ ಉಪನಗರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ..
ಸಂತೋಷನ ಶವವನ್ನು ಕಿಮ್ಸನ ಶವಗಾರಕ್ಕೆ ರವಾನಿಸಿ ತನಿಖೆ ಪ್ರಾರಂಭಿಸಿದ್ದಾರೆ.