ಫಯಾಜ್ ಅಬ್ ಲಾಕ.ಬೆಂಡಿಗೇರಿ ಪೊಲೀಸರ ಭರ್ಜರಿ ಭೇಟೆ. ಸಿ ಸಿ ಟಿವಿ ದೃಶ್ಯದಲ್ಲಿ ಕಳ್ಳನ ಕರಾಮತ್ತು ಸೆರೆ…..

ಹು-ಧಾ ಮಹಾನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಒಬ್ಬ ಖತರ್ನಾಕ ಕಳ್ಳನನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ,ಇನ್ನು ಬಂಧಿತನಿಂದ ವಿವಿಧ ಕಂಪನಿಗಳ 6 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಹುಬ್ಬಳ್ಳಿಯ ನೇಕಾರ ನಗರದ ಫಯಾಜ ತೊರೆವಾಲೆ ಎಂವ ಕಳ್ಳನನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಆರೋಪಿತರಿಂದ ಸುಮಾರು 2.25.000 ರೂ ಮೌಲ್ಯದ 6 ವಿವಿಧ ಕಂಪನಿಯ ಬೈಕ್ ವಶಪಡಿಸಿಕೊಳ್ಳಲಾಗಿದ.ಇನ್ನು ಯಾವ ರೀತಿಯಲ್ಲಿ ಬೈಕಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಸಿಸಿ ಟಿವಿ ಕ್ಯಾಮರಾ ಕಳ್ಳತನ ಮಾಡಿರುವುದು ಸೆರೆಯಾಗಿದೆ .

ಇನ್ನು ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ .ಡಿಸಿಪಿಗಳಾದ ಎಮ್ ನಂದಗಾವಿ. ಮತ್ತು ಸಿ ಆರ್ ರವೀಶ ಇವರ ಮಾರ್ಗದರ್ಶನದಲ್ಲಿ

ಬೆಂಡಿಗೇರಿ ಠಾಣೆಯ ಇನ್ಸಪೆಕ್ಟರ ಎಸ್ ಆರ್ ನಾಯಕ ಇವರ ನೇತೃತ್ವದಲ್ಲಿ ಪಿ.ಎಸ್.ಐ ರವಿ ವಡ್ಡರ ಸಿಬ್ಬಂದಿಗಳಾದ ಸಿ ಎಪ್ ಅಂಬಿಗೇರ.ಎನ್ ಐ ನೀಲಗಾರ. ಹಣಮಂತ ಕರಗಾಂವಿ. ಆರ್ ಎಸ್ ಹರಕಿ. ಬಿ ಎಸ್ ಗಳಗಿ. ಆರ್ ಎಚ್ ಹಿತ್ತಲಮನಿ. ಎಸ್ ಎಸ್ ಮೇಟಿ. ಜಿ ವಿ ವಗ್ಗಣ್ಣವರ ಈ ಒಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಇನ್ನು ಇವರ ಕಾರ್ಯವೈಖರಿಗೆ ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಶ್ಲಾಘಿಸಿ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.