ಪೊಲೀಸರ ಮೇಲೆ ಕಲ್ಲು ಚಾಕುವಿನಿಂದ ಹಲ್ಲೆಗೆ ಮುಂದಾದ ನಟೋರಿಯಸ ರೌಡಿಗಳು. ರೌಡಿಗಳನ್ನು ಬಂಧಿಸಿದ ಕಸಬಾ ಠಾಣೆಯ ಪೊಲೀಸರು

ಕಳೆದ ಕೆಲವು ದಿನಗಳ ಹಿಂದೆ ಕಸಬಾಪೇಟ ಠಾಣಾ ವ್ಯಾಪ್ತಿಯಲ್ಲಿ ಗ್ಯಾಂಗ್ ವಾರ ನಡೆದಾಗ ಒಬ್ಬ ರೌಡಿ ಶೀಟರನನ್ನು ಕಾಲಿಗೆ ಗುಂಡು ಹಾಕಿ ಬಂದಿಸಿದ್ದು .ಇನ್ನು ಅದೆ ಗ್ಯಾಂಗವಾರ ದಲ್ಲಿ ಭಾಗಿ ಆಗಿ ತೆಲೆ ಮರೆಸಿಕೊಂಡಿದ್ದ ಇಬ್ಬರನ್ನು ಕಸಬಾ ಠಾಣೆಯ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಟೊರೀಯಸ ರೌಡಿ ಗಳಾದ ಬಾರಾ ರಪೀಕ ಹಾಗು ಜಾಡ ಸಾಧೀಕ ಗಬ್ಬೂರ ಸರ್ಕಲ ಹತ್ತಿರ ಇರುವ ಬಗ್ಗೆ ಮಾಹಿತಿ ತಿಳಿದು ಕಸಾಬಾ ಠಾಣೆಯ ಇನ್ಸಪೆಕ್ಟರ ರಾಘವೇಂದ್ರ ಹಳ್ಳೂರ . ಹವಾಲ್ದಾರ್ ಎಲ್ ವಾಯ್ ಪಾಟೀಲ . ಹಣಮಂತ ಬ್ಯಾಡಗಿ ಸಹಿತ ಕೇಲವು ಸಿಬ್ಬಂಗಳು ಸೇರಿಕೊಂಡು ರೌಡಿಗಳನ್ನು ಬಂದಿಸಲು ಮುಂದಾದಾಗ ಕೊಲೆ ಹಾಗು ಜೀವ ಬೆದರಿಕೆಯನ್ನು ಹಾಕಿದ ರೌಡಿಗಳು ಪೊಲೀಸರ ಮೇಲೆ ಕಲ್ಲು ಹಾಗು ಚಾಕುವಿನಿಂದ ಹಲ್ಲೆ ಮಾಡಿ ಪರಾರಿ ಆಗಲು ಯತ್ನಿಸಿದ್ದಾರೆ . ಕಡೆಗೂ ಪೊಲೀಸರು ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸಿದ್ದಾರೆ .

ಇನ್ನು ಪೊಲಿಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಿಂಸ ಗೆ ದಾಖಲಿಸಿದ್ದಾರೆ . ಕಸಬಾ ಠಾಣೆಯ ಪೊಲೀಸರ ಕಾರ್ಯಾಚರಣೆಗೆ ನಟೋರಿಯಸ ರೌಡಿಗಳು ಅಲ್ಲದೆ ಅಕ್ರಮ ಕುಳಗಳು ಹೆದರಿ ಊರು ಬಿಡುತ್ತಿದ್ದಾರೆ ಅಂತಾ ಸಾರ್ವಜನಿಕರು ಮಾತಾಡುತ್ತಿದ್ದಾರೆ .
