ಅಂತರರಾಜ್ಯ ಅಫೀಮು ಪೆಡ್ಲರಗಳ ಹೆಡೆಮುರಿ ಕಟ್ಟಿದ ಇನ್ಸಪೆಕ್ಟರ ಸುರೇಶ್ ಯಳ್ಳೂರ ಆಂಡ್ ಟೀಮ್

ಹಳೇ ಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ಅಫೀಮ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸಪೆಕ್ಟರ ಸುರೇಶ ಯಳ್ಳೂರ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ರಾಜಸ್ಥಾನ ಮೂಲದ ವಿಕಾಸ್ ಬಿಷ್ಟೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಟೊಯ್ ಎಂಬ 3 ಡ್ರಗ್ಸ ಪೆಡ್ಡರ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬಂಧಿತರಿಂದ 23,500/-ರೂ ಮೌಲ್ಯದ 46 ಗ್ರಾಂ ಅಫೀಮು, ಒಂದು ದ್ವಿಚಕ್ರವಾಹನ, ಮೂರು ಮೊಬೈಲ್ ಗಳು, ಸೇರಿದಂತೆ ಒಟ್ಟು 1,29,500/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ,

ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್.ಹಾಗು ಡಿಸಿಪಿ ನಂದಗಾವಿ ಹಾಗು ಎಸಿಪಿ ಯು ಬಿ ಚಿಕ್ಕಮಠ ಇವರ ಮಾರ್ಗದರ್ಶನದಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸ ಇನ್ಸಪೆಕ್ಟರ ಸುರೇಶ ಯಳ್ಳೂರ ಅವರ ನೇತೃತ್ವದಲ್ಲಿ ಪಿಎಸಐ ಆರ ಎನ್ ಗುಡದರಿ. ಪಿ ಬಿ ಕಾಳೆ. ಎ ಎಸ್ ಐ ಎ ಪಿ ಕಟ್ನಳ್ಳಿ. ಪೋಲಿಸಿ ಸಿಬ್ಬಂದಿಗಳಾದ ಎಸ್ ಎ ವಲ್ಲಾಪುರ. ಕೆ ಎನ್ ಮೂಟೆಬೆನ್ನೂರ್
ಎನ್ ಎ ಕೆಂಚಣ್ಣವರ್. ಆರ್ ಎನ್ ಹಲ್ಲೆ .ಕೆ ವಿ ಕಲ್ಲನಗೌಡ. ವಿ ಎಸ್ ಹೊಸಳ್ಳಿ .ಚಂಡುನವರ್ .ಕಾರಜೋಳ .ನಾಗನೂರಿ.ನಾವಳ್ಳಿ ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.