ಬೇಲಿಯೆ ಎದ್ದು ಹೋಲ ಮೇಯ್ದ ಕಥೆ. ಕಾರ್ಮಿಕ ಇಲಾಖೆಯಲ್ಲಿ ಬಡವರ ಲ್ಯಾಪ್‌ಟಾಪ್ ಗೆ ಕನ್ನ ಹಾಕಿದ ಖದೀಮರು.

ಬೇಲಿಯೆ ಎದ್ದು ಹೋಲ ಮೇಯ್ದರೆ ಏನು ಮಾಡೊದು ಆ ಸ್ಥಿತಿ ಹುಬ್ಬಳ್ಳಿಯ ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ. ಹುಬ್ಬಳ್ಳಿ ಕಾರ್ಮಿಕ ಭವನದಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನು ಕೆಲವು ಆರೋಪಿಗಳನ್ನು ಬಂಧಿಸಿ ಅವರಿಂದ ಉಳಿದ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಬೇಕಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದರು.

ಈ ಕುರಿತು ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸೆಪ್ಟೆಂಬರ್ 6 ರಂದು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಲ್ಯಾಪ್‌ಟಾಪ್ ಗಳ ಕಳ್ಳತನದ ಕುರಿತು ಪ್ರಕರಣ ದಾಖಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ತಂದಿಟ್ಟಿದ್ದ ಸುಮಾರು 250 ಲ್ಯಾಪ್‌ಟಾಪ್ ಪೈಕಿ 101 ಲ್ಯಾಪ್‌ಟಾಪಗಳನ್ನು ಚಾಲಾಕಿ ತನದಿಂದ ಕಳ್ಳತನ ಮಾಡಿದ್ದರು ಇನ್ನು ತನಿಖೆ ನಡೆಸಿದ ಹಳೆ ಹುಬ್ಬಳ್ಳಿ ಠಾಣೆಯ ಇನ್ಸಪೆಕ್ಟರ ಸುರೇಶ ಹಳ್ಳೂರ ಅವರ ಕ್ರೈಂ ಸಿಬ್ಬಂದಿಗಳ ಚಾಣಾಕ್ಷತನದಿಂದ ಕಳ್ಳರನ್ನು ಹಿಡಿದು ಅವರಿಂದ 83 ಲ್ಯಾಪ್‌ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ದೀಪಕ ನಾಯಕ್, ಕೃಷ್ಣಾ ಕಬ್ಬೇರ್, ಸುಭಾಷ್ ಕುರಡಿಕೇರಿ, ಶ್ರೀನಿವಾಸ ಕೌಡೆನ್ನಣ್ಣವರ, ಸಾಯಿನಾಥ್ ಕೊರವರ, ನಾಗರಾಜ್ ಅಂಬೀಗೇರ್, ಪ್ರಕಾಶ ನಿಟ್ಟೂರ, ರುತಿಕ ಕ್ಯಾರಕಟ್ಟಿ,

ಫೈರೋಜ್ ಕೊಳ್ಳೂರ, ಮಲ್ಲಿಕಾರ್ಜುನ ಹಂಚಿನಾಳ, ಮೇಗನ್ ಕಠಾರೆ, ಅರ್ಜುನ್ ವಾಲೀಕಾರ್, ದಾದಾಪೀರ್ ಮುಜಾಹಿದ್, ವಿನಾಯಕ ಹಿರೇಮಠ, ರಾಹುಲ್ ಕಮಡೊಳ್ಳಿ,

ಅಭಿ ಚಲವಾದಿ, ಮಾಂತೇಶ್ ಇಜಾರದ, ಸುನೀ ಹುಬ್ಬಳ್ಳಿ, ಪ್ರಜ್ವಲ್ ಬಾಗಲಕೋಟ, ಹರೀಶದ ಸಗಡಿ, ರಂಜಾನ್ ಹಂಪಿಹೊಳ್ಳಿ, ಮಂಜುನಾಥ ಕ್ಯಾರಕಟ್ಟಿ, ನಾಗರಾಜ್ ಸರವಿ, ದರ್ಶನ ಲಗಟಗೇರಿ, ಚನ್ನಬಸಪ್ಪ ಬಿಸರಳ್ಳಿ, ರೇಣುಕಾ ಬಿಸರಳ್ಳಿ ಇವರು ಬಂಧಿತ ಆರೋಪಿಗಳಾಗಿದ್ದಾರೆ.
ಇನ್ನು ಬಂಧಿತರಿಂದ್ದ 45 ಲಕ್ಷ ರೂ. ಮೌಲ್ಯದ 83 ಲ್ಯಾಪ್‌ಟಾಪ್ ಗಳು, ಕೃತ್ಯಕ್ಕೆ ಬಳಸಿದ 1 ಕಾರ್, 2 ಆಟೋ, 2 ಬೈಕ್ ಸೇರಿ ಒಟ್ಟು 60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಈ ಒಂದು ಕಳ್ಳತನ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು ಭಾಗಿ ಆಗಿದ್ದಾರೆಂದು ಕಾರ್ಮಿಕ ಭವನದಲ್ಲಿ ಚರ್ಚೆ ಗಳು ಮೂಲೆಮೂಲೆಗಳಲ್ಲಿ ಕೇಳಿ ಬರುತ್ತಿದ್ದು . ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಅವರು ಇದರ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದದರೆ ಆ ಪತ್ರಕರ್ತರು ಯಾರು ಎಂದು ಗೊತ್ತಾಗುತ್ತದೆ.

ಈ ಒಂದು ಕಾರ್ಯಾಚರಣೆಯನ್ನು ಪೊಲೀಸ ಆಯುಕ್ತರ ಎನ್ ಶಶಿಕುಮಾರ್ ಹಾಗು ಡಿಸಿಪಿ ಗಳಾದ ಮಹಾನಿಂಗ ನಂದಗಾವಿ. ಸಿ ಆರ್ ರವೀಶ ಅವರ ಮಾರ್ಗಧರ್ಶನದಲ್ಲಿ ಹಳೆ ಹುಬ್ಬಳ್ಳಿ ಇನ್ಸಪೆಕ್ಟರ ಆದ ಸುರೇಶ ಹಳ್ಳೂರ ಅವರ ನೇತೃತ್ವದಲ್ಲಿ ಪಿ ಎಸ ಐ ಹಾಗು ಸಿಬ್ಬಂದಿಗಳಾದ ಪರಶುರಾಮ್ ಕಾಳೆ. ನಾಗರಾಜ್ ಕೆಂಚಣ್ಣನವರ.

ಅಭಯ ಕಟ್ನಳ್ಳಿ .ಕೃಷ್ಣ ಮೊಟ್ಟೆ ಬೆನ್ನೂರ್ .ಸಂತೋಷ್ ವಲ್ಲ್ಯಾಪುರ
ರಮೇಶ್ ಹಲ್ಲೆ. ಕಲ್ಲನಗೌಡ ವಿಟ್ಟಲ್ ಹೊಸಳ್ಳಿ ಸಹಿತ ಇನ್ನು ಅನೇಕ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲ್ಯಾಪ್‌ಟಾಪ್ ಕಳ್ಳತನ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಾರ್ಯಕ್ಕೆ ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.