ಇಬ್ಬರು ಖತರ್ನಾಕ ಚಾಲಾಕಿ ಬೈಕ್ ಕಳ್ಳಿಯರ ಬಂಧನ. ಐಷಾರಾಮಿ ಜೀವನಕ್ಕೆ ಬೈಕ್ ಕಳ್ಳತನ ಮಾಡುತ್ತಿದ್ದ ಮಹಿಳೆಯರು

ಹು-ಧಾ ಮಹಾನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ ಕಳ್ಳಿಯರು ಸೇರಿ ಐವರನ್ನು ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ,ಇನ್ನು ಅವರಿಂದ ವಿವಿಧ ಕಂಪನಿಗಳ 12 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಕುಮಾರ್ ತಿಳಿಸಿದರು.

ನಗರದ ಪದೆ ಪದೇ ಬೈಕ ಕಳ್ಳತನ ಹೆಚ್ಚಾಗಿರುವ ಕಾರಣ ಪೊಲೀಸರಿಫ಼ೆ ಇದು ತೆಲೆ ನೋವಾಗಿತ್ತು.ಇನ್ನು ವಿದ್ಯಾನಗರ ಪೊಲೀಸರ ಕಾರ್ಯಾಚರಣೆಗೆ ಯುವಕರು ಅಲ್ಲಾ ರೀ ಮಹಿಳೆಯರು ಸಿಕ್ಕಿ ಬಿದ್ದಿದ್ದಾರೆ.

ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಅವರು, ಪ್ರಕರಣದಲ್ಲಿ ಕೇಶ್ವಾಪೂರದ ರೇಷ್ಮಾ ಗುಡಗೇರಿ, ಗದಗಿನ ಆಸ್ಮಾಬಾನು ಬಾಗವಾನ್ ಉರ್ಪ್ ಮುಲ್ಲಾ, ರಾಮನಗರದ ರವಿ ಉರ್ಪ್ ನೀಲೆಶ್ ಬಣಸೋಡೆ, ಗದಗಿನ ಮುಬಾರಕ್ ಬಾಗವಾನ್, ಹುಬ್ಬಳ್ಳಿ ಕೆಕೆ ನಗರದ ದಸ್ತಗೀರ್ ಧಾರವಾಡ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳ ವಿರುದ್ಧ ಜಿಲ್ಲೆಯಲ್ಲದೇ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದ್ದು, ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 7 ಕೇಶ್ವಾಪೂರ ಠಾಣೆಯಲ್ಲಿ 3, ಹುಬ್ಬಳ್ಳಿ ಉಪನಗರ ಹಾಗೂ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಆರೋಪಿತರಿಂದ ಸುಮಾರು 6 ಲಕ್ಷ ರೂ ಮೌಲ್ಯದ 10 ವಿವಿಧ ಕಂಪನಿಯ ಸ್ಕೂಟಿಗಳು ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆ ಮಾಡುವ ಸಂದರ್ಭದಲ್ಲಿ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಮಹಿಳೆಯರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಮಹಿಳೆಯ ಮೂಲಕ ಆರೋಪಿತರು ಬೈಕ್ ಕಳ್ಳತನ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ, ಎಸಿಪಿ ಶಿವಪ್ರಕಾಶ್ ನಾಯಕ್, ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಂತ ಗೌಳಿ, ಜೋಡೆತ್ತುಗಳಾದ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಮತ್ತು ಬಿ ಎನ್ ಸಾತಣ್ಣವರ. ಬೆಸ್ಟ ಅವಳಿನಗರ ಕ್ರೈಂ ಸಿಬ್ಬಂದಿಗಳಾದ ಶಿವಾನಂದ ತಿರಕಣ್ಣವರ, ಪರಶುರಾಮ ಹಿರಗಣ್ಣವರ, ಅನಿಲ ಹುಗ್ಗಿ, ಮಲ್ಲಿಕಾರ್ಜುನ ಧನಿಗೊಂಡ, ಸಯ್ಯದಅಲಿ ತಹಶೀಲ್ದಾರ, ರಾಜೇಸಾಬ ಗುಂಜಾಳ, ಶರಣಗೌಡ ಮೂಲಿಮನಿ ಸೇರಿದಂತೆ ಮುಂತಾದವರು ಇದ್ದರು.