ಫ್ಲೈ ಓವರ್ ಕಾಮಗಾರಿಯಿಂದ ಮತ್ತೊಂದು ಯಡವಟ್ಟು.ಕುಡಿಯುವ ನೀರಿನ ಪೈಪ ಒಡೆದರು ಕಾಣೆಯಾದ ಸಿಬ್ಬಂದಿ.

ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾರಿ ಪ್ರಾರಂಭ ಮಾಡಿದ ಸಮಯವೆ ಸರಿ ಇಲ್ಲಾ ಅಂತಾ ಕಾಣುತ್ತೆ.
ಫ್ಲೈ ಓವರ್ ಕಾಮಗಾರಿಯ ಮತ್ತೊಂದು ಯಡವಟ್ಟು.ಇಗಾ ಸಾರ್ವಜನಿಕರಿಗೆ ತೊಂದರೆ ಆಗುವ ಲಕ್ಷಣಗಳು ಕಾಣುತ್ತಿವೆ. ಹುಬ್ಬಳ್ಳಿಗೆ ಕುಡಿಯುವ ನೀರನ್ನು ಸಂಪರ್ಕಿಸುವ ಚನ್ನಮ್ಮಾ ಸರ್ಕಲ್ ಹತ್ತಿರದ ಪೈಪ ಲೈನ ಒಡೆದು ಹೋಗಿ ಕುಡಿಯುವ ನೀರು ರಸ್ತೆ ತುಂಬಾ ಹರಿಯುತ್ತಿದೆ.
ಇನ್ನು ಕಾಮಗಾರಿ ಪಿಲ್ಲರ್ ಗೆ ಅಗೆದಿದ್ದ ಬೃಹತ್ ಗುಂಡಿಯಲ್ಲಿ ಬೃಹತ್ ನೀರಿನ ಪೈಪ್ ಹೊಡೆದು ಅವಾಂತರ ಸೃಷ್ಟಿ ಆಗಿದೆ. ನೀರು ಈ ತರಾ ರಸ್ತೆಯಲ್ಲಿ ಹರಿದರೆ ಜನಗಳಿಗೆ ಕುಡಿಯಲಿಕ್ಕೆ ನೀರಿನ ಸಮಸ್ಯೆ ಆಗುವುದರಲ್ಲಿ ಸಂದೇಹವಿಲ್ಲ.
ಪೈಪ ಲೈನ್ ಒಡೆದು ನೀರು ಕಾರಂಜಿಯಾಗಿ ಹುಬ್ಬಳ್ಳಿ ಚನ್ನಮ್ಮ ವೃತ ತುಂಬಾ ಹರಿದು ಹೋಗುತ್ತಿರುವ ದೃಶ್ಯ ಶನಿವಾರ ರಾತ್ರಿ ಕಂಡು ಬಂದಿದ್ದೆ. ಇನ್ನು ನೀರಿನ ರಭಸಕ್ಕೆ ವಾಹನ ಸವಾರು ಕೂಡಾ ಕಂಗಾಲು ಆಗಿದ್ದಾರೆ.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಆಗಿದ್ದು ಫ್ಲೈ ಓವರ್ ಕಾಮಗಾರಿ ನಡೆಸುವ ಸಿಬ್ಬಂದಿ ಒಂದು ತಿಂಗಳಿನಿಂದ ನಾಪತ್ತೆ ಆಗಿದ್ದಾರೆ. ಕಾಮಗಾರಿ ಎವಾಗ ಮಗಿಯುತ್ತೆ ಅಂತಾ ಸಾರ್ವಜನಿಕರು ಸರ್ಕಾರಕ್ಕೆ. ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಫ್ಲೈ ಓವರ್ ದಿಂದ ಅನುಕೂಲ ಆಗುವ ಲಕ್ಷಣಗಳು ಎವಾಗ ಆಗುತ್ತೆ ಅಂತಾ ಕಾದು ನೋಡಬೇಕಿದೆ