ಇಬ್ಬರು ಚಿಕ್ಕ ಮಕ್ಕಳನ್ನು ತಾಯಿ ಮಡಿಲಿಗೆ ಸೇರಿಸಿದ ಇನ್ಸಪೆಕ್ಟರ ಹೂಗಾರ & ಟೀಮ್ ಸಾರ್ವಜನಿಕರಿಂದ ಪ್ರಶಂಸೆಯ ಸುರಿಮಳೆ

ತಾಯಿಯಿಂದ ತಪ್ಪಿಸಿಕೊಂಡು, ಪೋಷಕರಿಗಾಗಿ ಹುಡುಗಾಟ ನಡೆಸಿದ್ದ ಮಕ್ಕಳನ್ನು ಪುನಃ ತಾಯಿಯ ಒಡಲನ್ನು ಸೇರುವಂತೆ ಮಾಡಿ ಉಪನಗರ ಠಾಣೆಯ ಪಿಐ ಎಮ್.ಎಸ್.ಹೂಗಾರ ಮಾನವೀಯತೆ ಮೆರೆದಿದ್ದಾರೆ.
ಹೌದು, ದೂರದ ಮುಂಡರಗಿಯಿಂದ ನಗರಕ್ಕೆ ಆಸ್ಪತ್ರೆಗೆ ಬಂದಿದ್ದ ತಾಯಿ, ಮಕ್ಕಳು ವಾಪಾಸ್ ತಮ್ಮೂರಿಗೆ ಹೋಗುವಾಗ ಮಕ್ಕಳು ತಾಯಿಯಿಂದ ತಪ್ಪಿಸಿಕೊಂಡಿದ್ದಾರೆ.

ಬಳಿಕ ಮಕ್ಕಳು ಎಷ್ಟೇ ತನ್ನ ತಾಯಿಯನ್ನು ಹುಡುಗಾಟ ನಡೆಸಿದರು ಸಹ ತಾಯಿ ಕಾಣುವುದಿಲ್ಲ. ಹೀಗಾಗಿ ಹಸಿವಿನಿಂದ ಬಳಲುತ್ತಿದ್ದ ತಪ್ಪಿಸಿಕೊಂಡ ಮಕ್ಕಳು ಚೆನ್ನಮ್ಮ ವೃತ್ತದ ಬಳಿಯಲ್ಲಿ ಅಳುತ್ತಾ ತಾಯಿಗಾಗಿ ಕಾಯುತ್ತಾ ಅಲೆದಾಡುತ್ತಿದ್ದರು.
ಮಕ್ಕಳನ್ನು ಅಳುತ್ತಾ ನಿಂತಿದನ್ನು ಸಾರ್ವಜನಿಕರು ಗುಂಪಾಗಿ ನೋಡುತ್ತಾ ನಿಂತ ಸಂದರ್ಭದಲ್ಲಿ ಪಿಐ ಹೂಗಾರ ಅವರಿಗೆ ಕಾಲ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಪಿಐ ಹೂಗಾರ ತಮ್ಮ ಸಿಬ್ಬಂದಿಗಳಿಗೆ ಮಕ್ಕಳ ಬಗ್ಗೆ ತಿಳಿಸಿದ್ದಾರೆ
ಆಗ ರೇಣು ಸಿಕ್ಕಲಗೆರ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿ, ಮಕ್ಕಳಿಗೆ ಸಮಾಧಾನ ಮಾಡಿದ್ದಲ್ಲದೇ, ಎಲ್ಲಾ ಸಿಬ್ಬಂದಿಗಳು ಸೇರಿ ತಾಯಿಯಿಂದ ತಪ್ಪಿಸಿಕೊಂಡಿದ್ದ ಮಕ್ಕಳಿಗೆ ತಾಯಿಯನ್ನು ಹುಡುಕಿಕೊಟ್ಟಿದ್ದಾರೆ. ಈ ಮೂಲಕ ತಾಯಿಯಿಂದ ಬೇರೆಯಾಗಿದ್ದ ಮಕ್ಕಳನ್ನು ಪುನಃ ತಾಯಿಯ ಒಡಲನ್ನು ಸೇರುವಂತೆ ಮಾಡಿದ್ದಾರೆ.
ಅಷ್ಟೇ ಅಲ್ಲದೇ ತಾಯಿ ಮಕ್ಕಳು ಸುರಕ್ಷಿತವಾಗಿ ಊರಿಗೆ ಕಳಿಸಲು ವ್ಯವಸ್ಥೆ ಕೂಡಾ ಮಾಡಿದ್ದಾರೆ. ಸದ್ಯ ಉಪನಗರ ಠಾಣೆಯ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.