ಹುಬ್ಬಳ್ಳಿಯಲ್ಲಿ ಟ್ರ್ಯಾಪ್ ಆದ ಹನಿಗಳು.ಇಬ್ಬರು ಹೆಣ್ಣುಮಕ್ಕಳು ಸಹಿತ 5ಜನರ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸರು

ಹುಬ್ಬಳ್ಳಿಯಲ್ಲಿ ಟ್ರ್ಯಾಪ್ ಆದ ಹನಿಟ್ರ್ಯಾಪ್ ಟೀಮ್ ಅವಳಿ ನಗರ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ. ಹುಬ್ಬಳ್ಳಿಯ ಚಗನ್ ಲಾಲ್ ಚೌಧರಿ ಎಂಬುವರಿಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್. ಹುಬ್ಬಳ್ಳಿಯಲ್ಲಿ ಹೆಸರಾಂತ ಬಾಂಡೆ ಅಂಗಡಿ ವ್ಯಾಪಾರಿ ಆಗಿದ್ದ ಚಗನ್ ಲಾಲ್ ಚೌಧರಿಯ ಕೆಲವು ವಿಡಿಯೋ ಗಳನ್ನು ಮಾಡುಕೊಂಡು ನಂತರ ಬ್ಲಾಕ ಮೇಲ್ ಮಾಡುತ್ತಿದ್ದ ಗ್ಯಾಂಗ್. ಎರಡು ಮೂರು ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿಕೊಂಡು ಸುಮಾರು ಐದು ಲಕ್ಷ ಹಣಕ್ಕೆ ಬ್ಲಾಕ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಖದೀಮರು. ಇದರಿಂದ ಮನನೊಂದ ಚಗನ್ ಲಾಲ್ ಚೌಧರಿ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಚಗನ್ ಲಾಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿದ್ದಾರೆ.

ಬಂಧಿತರಾದ ಮುಲ್ಲಾ ಓಣಿ ನಿವಾಸಿ ಆದ ಜೋಯಾ ಶಬಾನಾ.ತೂರವಿ ಹಕ್ಕಲದ ಪರವಿನ್ ಬಾನು. ಡಾಕಪ್ಪ್ ಸರ್ಕಲ್ ನಿವಾಸಿ ಆದ ಸಯೀದ್. ಹಾಗು ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್.ಅಬ್ದುಲ್ ರೆಹಮಾನ್. ಇನ್ನು ಸಯೀದ್. ತೌಸಿಪ್.ಅಬ್ದುಲ್ ರೆಹಮಾನ್. ಅಂಗಡಿ ಹೊರಗೆ ಹಾಕಿರುವ ನಂಬರಗಳನ್ನು ಕಲೆಕ್ಟ ಮಾಡಿ ಜೋಯಾ ಹಾಗು ಪರವಿನ ಗೆ ನೀಡುತ್ತಿದ್ದರು ನಂತರ ಇಬ್ಬರು ಅವರ ನಂಬರಗೆ ಮೆಸೆಜ ಕಾಲ ಮಾಡಿ ಸಲಿಗೆಯಿಂದ ಬಲೆಗೆ ಹಾಕಿಕೊಂಡು ಅವರ ಜೊತೆ ಇರುವ ವಿಡಿಯೋ ಗಳನ್ನು ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಎವಾಗ ಚಗನ್ ಲಾಲ್ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರೊ ಅವಾಗ ಕಾರ್ಯಾಚರಣೆಗೆ ಇಳಿದ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಹೆಡೆಮುರಿ ಕಟ್ಟಿದ್ದಾರೆ