ಸ್ವಾತಂತ್ರೊತ್ಸವದ ಸಂಭ್ರಮದ ನಡುವೆ ಎರಡು ಕಡೆ ಚಾಕು ಇರಿತ ಮತ್ತೆ ಬಾಲ ಬಿಚ್ಚುತ್ತಿರುವ ಪುಡಿ ರೌಡಿಗಳು

ಹುಬ್ಬಳ್ಳಿಯಲ್ಲಿ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ನಡೆದಿದ್ದು ಒಬ್ಬ ಆಟೊ ಚಾಲಕನಾಗಿದ್ದರೆ ಇನ್ನೊಂದು ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ನಡೆದಿದೆ ಇನ್ನು ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನ ಮೇಲೆ ಅನಿಲ್ ನಾಯಕ್ ಎಂಬಾತ ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಮೇಲೆ ಚಾಕುವಿನಿಂದ ಕೈಗೆ ತಿವಿದು ಹಲ್ಲೆ ಮಾಡಿ ಪರಾರಿ ಆಗಿದ್ದು ಈ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲವೆ ನಿಮಿಷಗಳಲ್ಲಿ ಆರೋಪಿ ಅನಿಲನನ್ನು ಇನ್ಸಪೆಕ್ಟರ ರಾಘವೇಂದ್ರ ಹಳ್ಳೂರ ಅವರು ಬಂದಿಸಿದ್ದಾರೆ

ಇನ್ನು ಹಳೆ ಹುಬ್ಬಳಿಯ ಇಬ್ರಾಹಿಮಪುರ ದಲ್ಲಿ
ಅರ್ಬಾಜ್ ಅಕ್ತರ್ ಎಂಬ ಆಟೊ ಚಾಲಕನ ಮೇಲೆ
ಇರ್ಫಾನ್ ಎಂಬಾತನು ಆಟೋ ಬಾಡಿಗೆ ವಿಷಯಕ್ಕೆ ಜಗಳ ಮಾಡಿ ಅರ್ಬಾಜ್ ಕುತ್ತಿಗೆಗೆ ಶೆವಿಂಗ ಬ್ಲೆಡ ದಿಂದ ಹಲ್ಲೆ ಮಾಡಿ ಪರಾರಿ ಆಗಿದ್ದು ಈ ಕುರಿತು ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಿಮ್ಸ್ ಆಸ್ಪತ್ರೆಗೆ ಎಸಿಪಿ ಆರ್ ಕೆ ಪಾಟೀಲ್ ಹಾಗೂ ಹಳೆ ಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಬೇಟಿ ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ.
