Uncategorized

ಹುಬ್ಬಳ್ಳಿ ಉಪನಗರ ಪೊಲೀಸರ ಬಲೆಗೆ  ಬಿದ್ದ ಖತರ್ನಾಕ ಬೈಕ ಕಳ್ಳ. ಬಂಧಿತನಿಂದ 12 ಬೈಕ್ ವಶ

ಛೋಟಾ ಬಾಂಬೆ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಬೈಕ್ ಕಳ್ಳತನ ಹೆಚ್ಚಾಗಿದೆ. ಜನಜಂಗುಳಿ ಪ್ರದೇಶ, ಹಾರ್ಟ್ ಆಫ್ ದಿ ಸಿಟಿಯಾಗಿರುವ ಚೆನ್ನಮ್ಮ ಸರ್ಕಲ್ ನಲ್ಲಿ ಬೈಕ್ ಕಳ್ಳತನವಾದ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದವು.

ಇನ್ನು ಈ ಕುರಿತು ಕಾರ್ಯಾಚರಣೆಗೆ ಇಳಿದ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಮ್ ಎಚ್ ಹೂಗಾರ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಖತರ್ನಾಕ ಬೈಕ್ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆನಂದ ನಗರದ ನಿವಾಸಿ ಮಹಾಂತೇಶ ಬಂಧಿತ ಆರೋಪಿಯಾಗಿದ್ದು, ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನು ಹಲವು ಬೈಕ್ ಕಳ್ಳತನ ಮಾಡಿರುವ ಕುರಿತು ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ.

ಸದ್ಯ ಬಂಧಿತನಿಂದ 5.80 ಲಕ್ಷ ಮೌಲ್ಯದ 12 ಬೈಕ ಹಾಗು 1.10 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದುಕೊಂಡು, ಆರೋಪಿತನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ .

ಈ ಕಾರ್ಯಾಚರಣೆಯನ್ನುಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಮತ್ತು ಡಿಸಿಪಿಗಳಾದ ಎಮ್ ನಂದಗಾವಿ ಹಾಗು ಸಿ ಅರ್ ರವೀಶ ಹಾಗು ಎಸಿಪಿ ಶಿವಪ್ರಕಾಶ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ ಇನ್ಸಪೆಕ್ಟರ ಎಮ್ ಎಚ್ ಹೂಗಾರ ಅವರ ನೇತ್ರತ್ವದಲ್ಲಿ ಪಿಎಸಐ . ದೇವೆಂದ್ರ ಮಾವಿನಂಡಿ.ಮಲ್ಲಿಕಾರ್ಜುನ ಹೊಸುರ ಸಿಬ್ಬಂದಿಗಳಾದ ಎಸ್ ವಿ ಯರಗುಪ್ಪಿ.ನಾಗರಾಜ ಗುಡಿಮನಿ.ಪಿ ಎಲ್ ಗೋವಿಂದಪ್ಪನವರ.ಪ್ರಕಾಶ ಕಲಗುಡಿ. ಎಮ್ ಎಚ್ ಹಾಲರವ್.ಎಸ್ ಬಿ ಯಳವತ್ತಿ. ಡಿ ಆರ್ ಪಮ್ಮಾರ .ಎ ಎಚ್ ಡೊಳ್ಳಿನ. ಟಿ ವೈ ಗಡದವರ.ನೆಹರೂ ಲಮಾಣಿ ಆರ್ ಎಚ್ ಸಿಕ್ಕಲಗೇರ ಇವರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಶ್ಲಾಘಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!