ಹುಬ್ಬಳ್ಳಿ ಜನತಾ ಬಜಾರ ಲಾಡ್ಜ್ ನಲ್ಲಿ ವ್ಯೆಕ್ತಿ ನೇಣಿಗೆ ಶರಣು

ಕಳೆದ ಕೆಲ ದಿನಗಳ ಹಿಂದೆ ಈ ವ್ಯಕ್ತಿ ಆದರ್ಶ ಲಾಡ್ಜ್ ನಲ್ಲಿ ವಾಸವಾಗಿದ್ದನಂತೆ. ಏಕಾಏಕಿ ಆ ವ್ಯಕ್ತಿ ಯಾವ ಕಾರಣಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಇನ್ನು ಆ ವ್ಯೆಕ್ತಿ ಕಾಣದಿದ್ದಾಗ ಹಾಗು ವ್ಯೆಕ್ತಿ ತಂಗಿದ್ದ ರೂಮ್ ನಿಂದ ದುರ್ವಾಸನೆ ಬರುತ್ತಿರುವುದರಿಂದ ಲಾಡ್ಜನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಂಶಯಗೊಂಡು ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಆಗಮೀಸಿದ ಉಪನಗರ ಪೊಲೀಸರು ರೂಮ್ ಡೋರ್ ಮುರಿದು ನೋಡಿದಾಗ ಆ ವ್ಯಕ್ತಿ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮೃತ ವೆಕ್ತಿಯ ಹೆಸರು 35 ವಯಸ್ಸಿನ ಗುರುಶಾಂತಪ್ಪಾ ಮಹದೇವಪ್ಪಾ ಕುಪ್ಪೆಲೂರ ಅಂತಾ ರಾಣೆಬೇನ್ನೂರ ತಾಲುಕೀನ ಹರಣಗಿ ಗ್ರಾಮದ ನಿವಾಸಿ ಆಗಿದ್ದು ಇಲ್ಲಿಗೆ ಯಾಕೆ ಬಂದಿದ್ದ ಮತ್ತು ಯಾಕೆ ನೇಣು ಹಾಕಿಕೊಂಡಿದ್ದ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಇನ್ನು ಶವವನ್ನು ಕಿಂಸನ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆ ಗೆ ರವಾನಿಸಲಾಗಿದೆ.