ಕ್ಷುಲಕ ಕಾರಣಕ್ಕೆ ಯುವಕನೊಬ್ಬನಿಗೆ ಚಾಕು ಇರಿತ.2 ತಾಸಿನಲ್ಲಿ ಆರೋಪಿಯನ್ನು ಬಂಧಿಸಿದ ಹಳೆ ಹುಬ್ಬಳ್ಳಿ ಪೊಲೀಸರು

ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ರವಿವಾರ ಸಂಜೆ ಹುಬ್ಬಳ್ಳಿಯಲ್ಲಿ ನಡೆಸಿದೆ.
ವಿನಾಯಕ ಚಿತ್ರಗಾರ (21) ಎಂಬಾತನ ಮೇಲೆಯೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರದ ವೆಲಕಮ್ ಹಾಲ್ ಹತ್ತಿರ ಈ ಒಂದು ಘಟನೆ ನಡೆದಿದೆ
ಸಮೀರ ಎಂಬಾತ ವಿನಾಯಕ ಚಿತ್ರಗಾರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿ ಆಗಿ ಎಂದು ತಿಳಿದುಬಂದಿದೆ.
ಇನ್ನು ಚಾಕುವಿನಿಂದ ಇರಿದು ಪರಾರಿ ಆಗಿದ್ದ ಸಮೀರ ಎಂಬಾತನನ್ನು ಕೆಲವೆ ಗಂಟೆಗಳಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲವೂ ದಿನಗಳ ಹಿಂದೆ ಸಮೀರ ಹಾಗು ವಿನಾಯಕ ಕುಂಟುಬದ ಮಕ್ಕಳ ಜಗಳ ಇಗಾ ಚಾಕು ಇರಿತದ ಹಂತಕ್ಕೆ ಬಂದಿದ್ದು ಎಂದು ಸಂಶಯ ವ್ಯೆಕ್ತವಾಗಿದೆ
ಸದ್ಯ ಗಾಯಗೊಂಡಿರುವ ವಿನಾಯಕ ಚಿತ್ರಗಾರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಘಟನೆ ತಿಳಿಯುತ್ತಿದ್ದಂತೆ ಕಿಮ್ಸ್ ಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.