ಉಂಡ ಮನೆಗೆ ಕನ್ನ ಹಾಕಿದ “ಭಟ್ಟ” ಶಂಭೊ ಶಂಭೋ ಏನು ನಿನ್ನ ಕರಾಮತ್ತು ಸಿ ಸಿ ಟಿವಿಯಲ್ಲಿ ಸೆರೆ

ಹುಬ್ಬಳ್ಳಿಯಲ್ಲಿ ಅಡುಗೆ ಭಟ್ಟನ ಕರಾಮತ್ತು ಹೋಟೆಲ್ ಗೆ ಕನ್ನ ಹಾಕಿ ಮಾಲೀಕನಿಗೆ ಪಂಗನಾಮ ಹಾಕಿ ಪರಾರಿ ಆದ ಘಟನೆ ನಡೆದಿದೆ.
ಹುಬ್ಬಳ್ಳಿಯ ಶಾಂತಿ ನಗರದಲ್ಲಿನ ಟೆಸ್ಟಿ ಟಿಫನ್ಸ್ ಹೊಟೇಲನಲ್ಲಿ ಈ ಒಂದು ಕಳ್ಳತನ ನಡೆದಿದ್ದು. ಅಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟ ಶಂಭು ಮುದ್ದೆಗೌಡರ್ ಎಂಬುವನು ಕಳ್ಳತನ ಮಾಡಿ ಪರಾರಿ ಆಗಿದ್ದಾನೆ.
ಕಳೆದ ಒಂದು ವಾರದಿಂದ ಹೊಟೆಲ್ ಬಂದ್ ಮಾಡಲಾಗಿತ್ತು. ಇನ್ನು ಕಳ್ಳತನ ಮಾಡುವ ಉದ್ದೇಶದಿಂದ ಶಂಬು ಹೊಂಚು ಹಾಕಿ ತಡ ರಾತ್ರಿ ಕಳ್ಳತನ ಮಾಡಿದ್ದಾನೆ.
ಇನ್ನು ಕಳೆದ ಮಧ್ಯರಾತ್ರಿ ಹೊಟೆಲ್ ನಲ್ಲಿನ ಕುಕ್ಕರ್, ಗ್ಯಾಸ್, ಫ್ರಿಡ್ಜ್, ಹಂಚು, ಹಿಟರ್ ಮಷಿನ್, ಗ್ರ್ಯಾಂಡರ್ ಸೇರಿದಂತೆ ವಸ್ತುಗಳನ್ನು ಗೂಡ್ಸ್ ವಾಹನದಲ್ಲಿ ಮಧ್ಯರಾತ್ರಿ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ಈ ಭಟ್ಟನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಯಾವ ರೀತಿಯಲ್ಲಿ ರಾಜಾ ರೋಷವಾಗಿ ಅಂಗಡಿಯಲ್ಲಿನ ವಸ್ತುಗಳನ್ನು ಗಾಡಿಯಲ್ಲಿ ಹಾಕುತ್ತಿರುವ ದೃಶ್ಯ ಗಳು ಸಿ ಸಿ ಟಿವಿಯಲ್ಲಿ ಸೆರೆ ಆಗಿದೆ.
ಈ ಒಂದು ಕಳ್ಳತನ ಇಪ್ಪತ್ತು ಸಾವಿರಕ್ಕೆ ಅಡುಗೆ ಬಟ್ಟ ಮಾಡಿರುವುದಾಗಿ ಅಂಗಡಿಯ ಮಾಲಿಕ ತನ್ನ ಅಳಲನ್ನು ತೊಡಿಕೊಂಡಿದ್ದಾನೆ.