ಮರಿಚಿಕೆಯಾದ ಅಭಿವೃದ್ಧಿ. ಕಡತಗಳಿಗೆ ಸೀಮಿತರಾದರಾ ಈಶ್ವರ ಉಳ್ಳಾಗಡ್ಡಿ..!! ನೊಡೊಣಾ ಮಾಡೋಣ..!! ಆಯುಕ್ತರೆ ಎನಿದು….

ಕಡತಗಳಿಗೆ ಸಹಿ ಮಾಡಲು ಸೀಮಿತರಾದ ಪಾಲಿಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ…
ಮರಿಚಿಕೆಯಾದ ಅಭಿವೃದ್ದಿ…!!
ಭರವಸೆಗಳಿಂದ ಬೇಸತ್ತ ಪಾಲಿಕೆಯ ಸದಸ್ಯರು, ಸಾರ್ವಜನಿಕರು!!
ಯಾವುದೇ ಕೆಲಸ ನೊಡೊಣಾ…..ಮಾಡೋಣ!!
ಹುಬ್ಬಳ್ಳಿ: ರಾಜ್ಯದಲ್ಲಿಯೇ ಎರಡನೇಯ ದೊಡ್ಜ ಮಹಾನಗರ ಪಾಲಿಕೆ ಎಂದೇ ಕರೆಯಲ್ಪಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೇಳಿಕೊಳ್ಳುವಂತ ಕೆಲಸ ಕಾರ್ಯಗಳು ಆಗುತ್ತಿಲ್ಲ, ಅಭಿೃವೃದ್ದಿ ಸಂಪೂರ್ಣವಾಗಿ ಕುಂಠಿತಗೊಂಡಿದೆ.
ಹೌದು, ಇದು ಹು-ಧಾ ಮಹಾನಗರ ಜನತೆ ಆಡಿಕೊಳ್ಳುತ್ತಿರುವ ಮಾತಾಗಿದೆ. ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿಯವರು ಬಂದ ಮೇಲೆ ಮಹಾನಗರ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಆಶಾವಾದದಲ್ಲಿದ್ದ ಜನತೆಗೆ ನಿರಾಶೆಯಾಗಿದೆ.

ಯಾಕೆಂದರೆ ಯಾವುದೇ ಹೊಸ ಕಾರ್ಯ ಯೋಜನೆ ಹೇಳಿಕೊಳ್ಳುವಂತಹದ್ದು ಆಗಿದ್ದು ನಡೆದಿಲ್ಲ ಆಗುತ್ತಿಲ್ಲ. ಹೀಗಾಗಿ ಅಜ್ಜ ಹಾಕಿದ ಆಲದ ಮರಕ್ಕೆ ಸದ್ಯ ಪಾಲಿಕೆಗೆ ಬಂದಿರುವ ಆಯುಕ್ತರು ನೀರು ಹಾಕಿಕೊಂಡು ಹೋಗುತ್ತಿದ್ದಾರೆ.
ಪಾಲಿಕೆಯಲ್ಲಿ ಯಾರೇ ಏನೇ ಮಾಡಿದರು ನಡೆಯುತ್ತದೆ ಎಂಬ ಪರಸ್ಥಿತಿ ಕಂಡು ಬರುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದನ್ನೆಲ್ಲ ಕಂಟ್ರೋಲ್ ಮಾಡಬೇಕಾದ ಪಾಲಿಕೆ ಆಯುಕ್ತರು ಯಾವುದನ್ನು ನೋಡುತ್ತಿಲ್ಲ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ.
ಇನ್ನೂ ಇವರ ಕೈಕೆಳಗಿನ ಅಧಿಕಾರಿಗಳು ಕೂಡಾ ಅಭಿವೃದ್ಧಿ ಬಗ್ಗೆ ತಲೆ ಕೇಡಿಸಿಕೊಳ್ಳುತ್ತಿಲ್ಲ, ಹೀಗಾಗಿ ಹೇಳೊರಿಲ್ಲ ಕೇಳೊರಿಲ್ಲ ಎಂಬ ವ್ಯವಸ್ಥೆ ಸದ್ಯ ಪಾಲಿಕೆಯಲ್ಲಿ ಕಂಡು ಬರುತ್ತಿದೆ.
ಆಯುಕ್ತರ ವಿರುದ್ಧ ಸದಸ್ಯರ ಅಸಮಾಧಾನ;
ಪಾಲಿಕೆಯಲ್ಲಿ ವಾರದಲ್ಲಿ ಮೂರು ನಾಲ್ಕು ದಿನ ಬಿಡುವಿಲ್ಲದ ಸಭೆ ಕಾರ್ಯಕ್ರಮ, ಇದರ ನಡುವೆ ಅಲ್ಲಿ ಇಲ್ಲಿ ಎನ್ನುತ್ತಾ ಆಯುಕ್ತರು ಯಾರ ಕೈಗೆ ಸಿಗುತ್ತಿಲ್ಲವಂತೆ. ಉಳಿದ ಸಮಯದಲ್ಲಿ ಕೇವಲ ಪೈಲ್ ಗಳಿಗೆ ಸಹಿ ಮಾಡುವುದರಲ್ಲಿಯೇ ಬ್ಯುಜಿಯಾಗಿದ್ದಾರೆ. ಕಚೇರಿಯಲ್ಲೂ ಅದೇ ಕೆಲಸ ಗೃಹ ಕಚೇರಿಯಲ್ಲೂ ಅದೇ ಕೆಲಸವಾಗಿದೆ. ಇದರಿಂದಾಗಿ ಮಹಾನಗರ ಪಾಲಿಕೆಯ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಆಯುಕ್ತರು ಸರಿಯಾಗಿ ಕೈಗೆ ಸಿಗುತ್ತಿಲ್ಲ. ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ವಾರ್ಡ್ ಅಭಿವೃದ್ಧಿ ಕುರಿತಾದ ಪೈಲ್ ಗಳಿಗೆ ಸಹಿ ಆಗುತ್ತಿಲ್ಲ. ಎಲ್ಲವೂ ನಿಂತ ನೀರಾಗಿದೆ. ಏನೇ ಹೇಳಿದರು ತಲೆ ಕೇಡಿಸಿಕೊಳ್ಳುತ್ಲಿಲ್ಲ ಎಂಬ ಮಾತನ್ನು ಪಾಲಿಕೆಯ ಸದಸ್ಯರು, ಅಧಿಕಾರಿಗಳು ಹೇಳುತ್ತಿದ್ದಾರೆ.
ಶಾಸಕರಿಗೆ ದೂರು ನೀಡಿದ ಸದಸ್ಯರು: ಆಯುಕ್ತರ ಕಾರ್ಯವೈಖರಿಯ ವಿರುದ್ದ ಬೇಸರಗೊಂಡಿರುವ ಪಾಲಿಕೆ ಸದಸ್ಯರು, ಆಯುಕ್ತರು ಕೇವಲ ಸಭೆ ಕಾರ್ಯಕ್ರಮ, ಸುತ್ತಾಟಗಳದಲ್ಲಿ ಮುಳುಗಿ ಹೋಗಿದ್ದಾರೆ. ಹೀಗಾಗಿ ಹೇಳಿಕೊಳ್ಳುವಂತ ಒಂದೇ ಒಂದು ಅಭಿವೃದ್ದಿ ಕೆಲಸ ಕಾರ್ಯಗಳಾಗಿಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಏನೇ ಆಗಲಿ ಯಾರೇ ಕೆಲಸ ಕಾರ್ಯಗಳನ್ನು ಹೊತ್ತುಕೊಂಡು ಅಧಿಕಾರಿಗಳ ಬಳಿ ಬಂದರೆ ಕೂಡಲೇ ಪರಿಶೀಲನೆ ಮಾಡಿ ಸ್ಪಂದಿಸಬೇಕಾದ ಕೆಲಸ ಪಾಲಿಕೆ ಆಯುಕ್ತರದ್ದು, ಹೀಗಿರುವಾಗ ಸಧ್ಯ ಆಯುಕ್ತರು ಏನು ಮಾಡ್ತಾ ಇದ್ದಾರೆ? ಪಾಲಿಕೆಯಲ್ಲಿ ಏನು ನಡೆಯುತ್ತಿದೆ? ಎಷ್ಟರ ಮಟ್ಟಿಗೆ ಕೆಲಸ ಕಾರ್ಯಗಳು ಆಗುತ್ತಿವೆ ಎಂಬ ಪ್ರಶ್ನೆಗಳು ಎಲ್ಲರಲ್ಲಿ ಮೂಡಿದ್ದು, ಇನ್ಮೇಲೆ ಆದರೂ ಅಭಿವೃದ್ಧಿ ಕಾರ್ಯಕ್ಕೆ ಆಯುಕ್ತರು ಗಮನ ಹರಿಸ್ತಾರಾ ಎಂಬುದನ್ನು ಕಾದುನೋಡಬೇಕು.