ಕಲಘಟಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಇಬ್ಬರು ಬೈಕ ಕಳ್ಳರ ಬಂಧನ

ಕಲಘಟಗಿ ತಾಲೂಕಿನ ಸೂರಶಟ್ಟಿಕೊಪ್ಪ ಗ್ರಾಮದಲ್ಲಿ ಇತ್ತಿಚ್ಚಿಗೆ ನಡೆದ ಕಳ್ಳತ ನ ಪ್ರಕರಣ ಬೇದಿಸುವಲ್ಲಿ ಕಲಘಟಗಿ ಪೊಲೀಸ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ .

ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡವು ಇಬ್ಬರನ್ನು ಬಂದಿಸಿ ಅವರಿಂದ 25000 ನಗದು ಹಣ ’05 ಗ್ರಾಂ ಬಂಗಾರ ಮತ್ತು 02 ದ್ವಿಚಕ್ರ ವಾಹನಗಳು ಅಂದಾಜು 1 ಲಕ್ಷ 20 ಸಾವಿರ ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ ಇನ್ನು ಬಂದಿತ ಆರೋಪಿಗಳಾದ
ರಾಘವೇಂದ್ರ ತಂದೆ ಹೊಳಿಯಪ್ಪ ಭಜಂತ್ರಿ ಸಾ: ಕೆಂಬಾವಿ ಜಿಲ್ಲಾ ಯಾದಗಿರಿ.ಲೋಕೇಶ ತಂದೆ ಚಂದ್ರಪ್ಪ ಭಜಂತ್ರಿ. ಸಾ:ಗಜೇಂದ್ರಗಡ ಜಿಲ್ಲಾ: ಗದಗ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಪಿ ಎಸ್ ಐ ಬಸವರಾಜ್,ಯದಲಾಗುಡ್,
ಎಸ್ ಎಫ್ ಕಟ್ಟಿಮನಿ ,ಮಾಂತೇಶ್ ನಾನಾಗೌಡ , ಶ್ರಿದರ್ ಗುಗ್ಗರಿ, ಗೋಪಾಲ್ ಪೀರಗಿ,ಎ ಎಮ್ ನವಲೂರ, ಪ್ರಬು, ಹಾಗೂ ಅಭಿನಂದನ ಅವರು ಪಾಲ್ಗೊಂಡಿದ್ದಾರೆ