ಮೋಜು-ಮಸ್ತಿಗಾಗಿ ಕಳ್ಳತನ.ಕಳ್ಳನನ್ನು ಲಾಕ್ ಮಾಡಿದ ಇನ್ಸಪೆಕ್ಟರ ಶ್ರೀಶೈಲ್ ಕೌಜಲಗಿ & ಟೀಮ್……

ಮೋಜು ಮಾಸ್ತಿಗಾಗಿ ಕಳ್ಳತನಕ್ಕೆ ಇಳಿದು ಮೊದಲ ಕಳ್ಳತನದಲ್ಲೇ ಪೋಲೀಸರ ಬಲೆಗೆ ಲಾಕ್ ಆದ ಕಿರಣ್.ಕುಡಿತದ ಚಟಕ್ಕೆ ಹಣ ಸಿಗದೇ ಇರೋದಕ್ಕೆ 22 ವಯಸ್ಸಿನ ಕಿರಣ ಮಾಡಲಗಿ ಬೊಗೇನಾಗರಾಕೊಪ್ಪಾ ದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಪಾಟೀನ ಕೀಲಿ ಮುರಿದು ಅದಲ್ಲಿ ಇದ್ದ 1.01500 ರೊಪಾಯಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದು ಇನ್ನು ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ ಒಂದೇ ದಿನದಲ್ಲಿ ಕಳ್ಳನನ್ನು ಬಂಧಿಸಿದ್ದಾರೆ. ಇನ್ನು ಬಂಧಿತನಿಂದ 70 ಸಾವಿರ ಹಣವನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಒಂದು ಕಾರ್ಯಚರಣೆಯಲ್ಲಿ ಕಲಘಟಗಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಸಿ.ಎನ್.ಕರವೀರಪ್ಪನರ, ನೇತೃತ್ವದಲ್ಲಿ ಮತ್ತು ಸಿಬ್ಬಂಧಿಗಳಾದ ಮಾಂತೆಂಶ ನಾನಾಗೌಡ, ಪರಶು ಮಾಳಗೊಂಡ, ಗೋಪಲ ಪಿರಗಿ, ಹುಸೇನ ಎಲಿಗಾರ, ಪ್ರಕಾಶ ಗೂಳಪ್ಪಗೌಡ್ರ, ಶಿವಶರಣ ಕಚನೂರ, ಮಾದೇವ ನಿಡವಣೆ, ಪ್ರವೀಣ ಅಂಗಡಿ ಇವರುಗಳು ಕಾರ್ಯಚಾರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ ಇವರ ಕಾರ್ಯಚಾರಣೆಗೆ ಎಸ್ ಪಿ ಗೋಪಾಲ ಬ್ಯಾಕೋಡ ಪ್ರಸಂಸೆ ವ್ಯೆಕ್ತಿಪಡಿಸಿದ್ದಾರೆ