Uncategorized

ಬಡ್ಡಿ ಕುಳಗಳಿಗೆ ಖಡಕ ವಾರ್ನಿಂಗ್ ನೀಡಿದ ಕಮೀಷನರ್ ಎನ್ ಶಶಿಕುಮಾರ್. ಹುಬ್ಬಳ್ಳಿಯಲ್ಲಿ ಮೀಟರ ಬಡ್ಡಿಗೆ ಮತ್ತೊಂದು ಬಲಿ…..

ಹುಬ್ಬಳ್ಳಿ ಧಾರವಾಡ ಗೆ ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಬಂದ ಮೇಲೆ ಮೀಟರ್ ದಂಧೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಡ್ರೈವ್ ಮಾಡಿ ಮೀಟರ್ ಬಡ್ಡಿ ದಂಧೆಗೆ ಒಂದಿಷ್ಟು ಕಡಿವಾಣ ಹಾಕಿ ಬೇಸತ್ತಿದ್ದ ಜನತೆಗೆ ನೆಮ್ಮದಿ ನೀಡುವ ವಾತಾವರಣ ವನ್ನು ಪೊಲೀಸ್ ಆಯುಕ್ತರು ಮಾಡಲು ಮುಂದಾಗಿದ್ದು ಇದರ ನಡುವೆ ಯೂ ಕೂಡಾ ಅವಳಿ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಿಂತುಕೊಂಡಿಲ್ಲ ಎಂಬೊದಕ್ಕೆ ಬಲಿಯಾಗುತ್ತಿರುವ ಜೀವಗಳೇ ಸಾಕ್ಷಿಯಾಗಿದೆ.

ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ನಗರ ಉಣಕಲ್ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಿವಾನಂದ ಕಳ್ಳಿಮನಿ ಸಾವು. ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಗೋಕುಲನಲ್ಲಿ ಮೀಟರ ಬಡ್ಡಿಗೆ ವ್ಯಕ್ತಿಯೊಬ್ಬ ಸಾವಿಗೆ ಶರಣಾದ ಘಟನೆ ಮಾಸುವ ಮುನ್ನವೆ ಹುಬ್ಬಳ್ಳಿಯ ಉಣಕಲ್ ನಿವಾಸಿಯಾದ ಶಿವಾನಂದ ಕಳ್ಳಿಮನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ತಿಕ ಬಳ್ಳಾರಿ ಎಂಬುವನ ಹತ್ತಿರ ಶಿವಾನಂದ ನಾಲ್ಕು ಲಕ್ಷ ಸಾಲ ಪಡೆದುಕೊಂಡಿದ್ದ. ನಾಲ್ಕು ಲಕ್ಷ ಕ್ಕೆ ನಾಲ್ಕು ಲಕ್ಷ ಕೇವಲ ಬಡ್ಡಿಗೆ ಜಮಾ ಆಗಿದೆ ಎಂದು ಪದೇ ಪದೇ ಕಾರ್ತಿಕ ತನಗೆ ಕಿರುಕುಳ ನೀಡುತ್ತಿದ್ದಾನೆ ಅಂತಾ ಶಿವಾನಂದ ಡೆತ್‌ ನೋಟವನ್ನು ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ಹೇಳಿದ್ದಾರೆ.

ಇನ್ನೂ ಇದೇ ವೇಳೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರ ಕಾಲಿಗೆ ಬಿದ್ದು ತಮ್ಮ ಅಳಲನ್ನು ಮೃತ ಶಿವಾನಂದನ ಕುಟುಂಬಸ್ಥರು ತೊಂಡಿಕೊಂಡಿದ್ದಾರೆ. ಇನ್ನು ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್ ಅವರು ಯಾವುದೇ ಕಾರಣಕ್ಕೂ ಆರೋಪಿಯನ್ನು ಬಿಡಲ್ಲಾ ನಿಮಗೆ ನ್ಯಾಯ ಖಂಡಿತವಾಗಿಯೂ ಕೊಡಿಸುತ್ತೆವೆ ಅಂತಾ ಕುಟುಂಬದವರಿಗೆ ತಿಳಸಿದ್ದಾರೆ.

ಇದೆ ಸಮಯದಲ್ಲಿ ಅವಳಿ ನಗರದ ಜನತೆಗೆ ಸ್ವಷ್ಟ ವಾದ ಸಂದೇಶವನ್ನು ನೀಡಿದ್ದಾರೆ ಯಾರೆ ಆಗಲಿ ಹಣಕ್ಕೆ ಹೆಚ್ಚಿನ ಬಡ್ಡಿ ಸಲುವಾಗಿ ಪಿಡಿಸುತ್ತಿದ್ದರೆ ನೇರವಾಗಿ ತಮ್ಮನ್ನು ಸಂಪರ್ಕಿಸಿ ವಿನಾಕಾರಣ ಯಾವುದೇ ರೀತಿಯಲ್ಲಿ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ ಎಲ್ಲರ ಜೊತೆಗೆ ಪೊಲೀಸರು ಯಾವತ್ತು ಇದ್ದಾರೆ ಅಂತಾ ಹೇಳುತ್ತಾ ಆತ್ಮವಿಶ್ವಾಸದ ಮಾತುಗಳನ್ನು ಅವಳಿ ನಗರದ ಜನತೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!