ಹುಬ್ಬಳ್ಳಿಯಲ್ಲಿ 18 ಅಂಗನವಾಡಿ ಕಾರ್ಯಕರ್ತರ ಬಂಧನ…… Etv24×7 ಬಿಗ್ ಇಂಪ್ಯಾಕ್ಟ್

ಅಂಗನವಾಡಿ ಮಕ್ಕಳ ಆಹಾರ ಅಕ್ರಮವಾಗಿ ಸಂಗ್ರಹಿಸಿದ್ದ ಕೇಸನಲ್ಲಿ ಹೊಸ ತಿರುವು ಸುಮಾರು 26 ಜನರ ಬಂದನ.ಹುಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಕಸಬಾಪೇಟೆ ಪೊಲೀಸ ಠಾಣೆಯಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ
ಕಳೆದ ಹದಿನೈದರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು,ಸಹಾಯಕ ಆಯುಕ್ತರು ಗೋಡೌನ್ ಮೇಲೆ ದಾಳಿ ಮಾಡಿದಾಗ ಮಕ್ಕಳ ಅಹಾರ,ಗರ್ಭಿಣಿಯರ ಆಹಾರ ಸಂಗ್ರಹ ಮಾಡಿದ್ದು ಗೊತ್ತಾಗುತ್ತದೆ.
ಕೂಡಲೇ ಅಧಿಕಾರಿಗಳು ಕಸಬಾಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದರಿಂದ ದಾಳಿ ನಡೆಸಿದ ಸಮಯಕ್ಕೆ ಅಲ್ಲಿ ಗೋದಿ. ರವ ಹಾಲಿನ ಪುಡಿ, ಬೆಲ್ಲ ರವೆ ಹೆಸರುಕಾಳು ಅಕ್ಕಿ ಬೆಲ್ಲ ಸೇರಿ ನಾಲ್ಕು ಲಕ್ಷ ಮೌಲ್ಯದ ಅಹಾರದ ಪಾಕೆಟ್ ಸೀಜ್ ಮಾಡಲಾಗಿದ್ದು ಇನ್ನು
ಗೋಡೌನ್ ಮಾಲೀಕ ಹಾಗೂ ಬಾಡಿಗೆ ಪಡೆದುಕೊಂಡವರು ಸೇರಿ ಮೊದಲು ಎಂಟು ಜನ ವಶಕ್ಕೆ ಪಡೆದುಕೊಂಡು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸುಮಾರು 18 ಅಂಗನವಾಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಇಂಡೆಂಟ್ ಹಾಕೋದು ಕಂಡು ಬಂದಿದೆ. ಹೀಗಾಗಿ 18 ಜನ ಅಂಗನವಾಡಿ ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ
ಇದೊಂದು ಗಂಭೀರ ಪ್ರಕರಣವಾಗಿದ್ದು ಈ ಪ್ರಕರಣದ ಸೂತ್ರಧಾರರು ನಾಪತ್ತೆಯಾಗಿದ್ದಾರೆ. ಮಾಹಿತಿ ಪ್ರಕಾರ
ಸೂತ್ರಧಾರರು ಹೊರರಾಜ್ಯದಲ್ಲಿದಾರೆ ಎಂದು ಪೊಲೀಸ ಕಮೀಷನರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಕೂಡಲೇ ಅವರನ್ನು ಸಹ ಅರೆಸ್ಟ್ ಮಾಡತೀವಿ ಎಂದರು.
ಪ್ರಮುಖ ಸೂತ್ರಧಾರರು ಇಬ್ಬರು ನಾಪತ್ತೆ ಆಗಿದ್ದು ಇದೊಂದು ದೊಡ್ಡ ಜಾಲ ಇದೆ ಎಂದ ಕಮೀಷನರ್.

ತನಿಖಾ ಹಂತದಲ್ಲಿ ಇರೋ ಕಾರಣಕ್ಕೆ ಹೆಸರು ಬೇಡಾ ಎಂದ ಕಮೀಷನರ್ ಒಟ್ಟು ನಾಲ್ಕು ವಿಭಾಗದ ಫಲಾನುಭವಿಗಳ ಅಹಾರ ಧಾನ್ಯ ಸಂಗ್ರಹ ಮಾಡಿದ್ರು. ಇದೊಂದು ಕೆಟ್ಟ ಅಪರಾಧ, ನನಗೆ ಈ ಪ್ರಕರಣದಲ್ಲಿ ಯಾರೂ ಒತ್ತಡ ಹಾಕಿಲ್ಲ..

ಇನ್ನು ಪ್ರಮುಖ ಆರೋಪಿ ಬೈತಲ್ಲೂ ಮಾತಾಡಿರೋ ಆಡಿಯೋ ನನಗೂ ಸಿಕ್ಕಿದೆ. ಆಡಿಯೋ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಲೀಗಲ್ ಒಪನಿಯನ್ ಪಡೆದ ಬಳಿಕ ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಲು ಸೂಚನೆಯನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು
