ಹುಬ್ಬಳ್ಳಿಯಲ್ಲಿ ಮುಸುಕುದಾರಿ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇತ್ತಿಚೆಗೆ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನರು ಭಯದಲ್ಲಿ ಓಡಾಡುವಂತಾಗಿದೆ. ಅಲ್ಲದೇ ಇದೀಗ ಸಾರಿಗೆ ಇಲಾಖೆಯನ್ನು ಬಿಡದ ಖದೀಮರು ಬಸ್ ನಿಲ್ದಾಣದಲ್ಲಿರುವ ಸಾವಿರಾರು ಬೆಲೆಯ ವಸ್ತುಗಳನ್ನು ಕಳತನ ಮಾಡಿದ್ದಾರೆ.
ಹುಬ್ಬಳ್ಳಿಯ ಶರಹ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಿಬಿಟಿಯ ಬಸ್ ನಿಲ್ದಾಣದಲ್ಲಿ ಕನ್ನ ಹಾಕಿರುವ ಮುಸುಕುದಾರಿಗಳು ನಿಲ್ದಾಣದಲ್ಲಿದ್ದ ಸುಮಾರು 50 ಸಾವಿರ ಮೌಲ್ಯದ ನೀರಿನ ವಾಲ್’ಗಳನ್ನು ಕದ್ದು ಪರಾರಿಯಾಗಿದ್ದಾರೆ.ಘಟನೆ ನಡೆದು ಒಂದು ವಾರ ಕಳೆದರು ಮುಸುಕುದಾರಿ ಕಳ್ಳರು ಪತ್ತೆಯಾಗಿಲ್ಲ.
ಇನ್ನು ಕಳ್ಳರ ಕೈಚಳಕ ಸಿಬಿಟಿಯ ಸಿಸಿಕ್ಯಾಮೇರಾದಲ್ಲಿ ಸೆರೆಯಾಗಿದೆ. ಆದರೆ ಕದೀಮರಿಬ್ಬರು ಮುಸುಕು ಹಾಕಿಕೊಂಡಿದ್ದು, ಇದೀಗ ಈ ಕುರಿತು ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಶರಹ ಪೊಲೀಸ್ ಇನ್ಸ್ಪೆಕ್ಟರ್ ಎಮ್.ಎಮ್.ತಹಶಿಲ್ದಾರ ನೇತೃತ್ವದ ತಂಡ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.