ಹುಬ್ಬಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ…… ಸಿಸಿ ಟಿವಿ ಯಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಗ್ರಾಹಕರಿಗೆ ಬಟ್ಟೆ ತೋರಿಸೋವಾಗ ಬಟ್ಟೆ ಅಂಗಡಿ ಸಿಬ್ಬಂದಿಗೆ ಹೃದಯಾಘಾತವಾಗಿದೆ ಏಕಾಏಕಿ ಕುಸಿದು ಬಿದ್ದ ಹಿನ್ನಲೆ ಗ್ರಾಹಕರು ಶಾಕ್ ಆಗಿದ್ದಾರೆ.
ಹುಬ್ಬಳ್ಳಿಯ ಎನ್ ಆರ್ ಸಾರಿ ಸೆಂಟರನಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸೋವಾಗ ಹೃದಯಾಘಾತ ವಾಗಿದೆ.ಇನ್ನು ಹೃದಯಾಘಾತದಿಂದ ನರಳಾಡೋ ಮನುಕುಲುಕು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿರೋ ಎನ್ ಆರ್ ಸಾರಿ ಸೆಂಟರನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ 43 ವರ್ಷದ ಭವರ್ ಸಿಂಗ ಅಂಗಡಿಗೆ ಬಟ್ಟೆ ಖರೀದಿ ಮಾಡಲು ಬಂದಿದ್ದ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದ ಕ್ಷಣಮಾತ್ರದಲ್ಲಿಯೇ ಎದೆನೋವು ಕಾಣಿಸಿಕೊಂಡು ಕೆಳಗೆ ಬಿದಿದ್ದಾನೆ. ಆತನನ್ನು ನೋಡಿದ ಸಹ ಸಿಬ್ಬಂದಿ ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆದರೂ ಚಿಕಿತ್ಸೆ ಫಲಿಸದೆ ಬವರ್ ಸಿಂಗ್ ಮೃತಪಟ್ಟಿದ್ದಾನೆ.