ಪೊಲೀಸ್ ಠಾಣೆ ಕೂಗಳತೆಯ ದೂರದಲ್ಲಿ ಸ್ವಾಮಿಗೆ ಚಾಕು ಇರಿತ
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಕೂಗಳತೆಯ ದೂರದಲ್ಲಿ ವ್ಯಕ್ತಿಯೊರ್ವನಿಗೆ ಚಾಕು ಇರಿದಿರುವ ಘಟನೆ ನಡೆದಿದೆ.

ಇಲ್ಲಿನ ಉಪನಗರ ಠಾಣೆಯ ಕೂಗಳತೆಯ ದೂರದಲ್ಲಿ ಈ ಒಂದು ಘಟನೆ ನಡೆದಿದ್ದು, ವೇಶ್ಯಾವಾಟಿಕೆ ವಿಚಾರವಾಗಿ ಮಹಿಳೆ, ಏಜೆಂಟ್ ಜೊತೆಗೂಡಿ ಗ್ರಾಹಕನೊಂದಿಗೆ ವ್ಯವಹಾರದ ವಿಚಾರವಾಗಿ ಮಾತಿನ ಚಕಮಕಿ ನಡೆದು ಗ್ರಾಹಕ ಚಾಕು ಇರಿದಿದ್ದಾನೆಂದು ತಿಳಿದುಬಂದಿದೆ.

ಸದ್ಯ ಚಾಕು ಇರಿತಕ್ಕೆ ಒಳಗಾದ ಸ್ವಾಮಿಯ ಕೈಗೆ ಗಾಯವಾಗಿದ್ದು ಆತನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು .ಈ ಘಟನೆ ಹುಬ್ಬಳ್ಳಿಯ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಚಾಕು ಇರಿತವಾಗಿ ಅರ್ಧ ಗಂಟೆಯಲ್ಲಿ ಆರೋಪಿಯನ್ನು ಬಂದಿಸಿದ ಉಪನಗರ ಠಾಣೆಯ ಪೊಲೀಸರು